Hubli: ರಸ್ತೆ ಬದಿ ನಿಂತು ಪ್ಯಾರ್ಲ್ ಹಣ್ (ಪೇರಲೆ ಹಣ್ಣು) ಖರೀದಿ ಮಾಡಿ ಸವಿದ ಕೇಂದ್ರ ಸಚಿವ ಜೋಶಿ

Hubli News: ಕೆಲವರು ಸಣ್ಣ ಪುಟ್ಟ ಹುದ್ದೆ ಇದ್ದರೂ ಪರಲೋಕದವರಂತೆ ಆಡುತ್ತಾರೆ. ಆದರೆ ನಿಜವಾಗಿಯೂ ಉನ್ನತ ಸ್ಥಾನದಲ್ಲಿ ಇದ್ದವರು ಹಾಗಿರುವುದಿಲ್ಲ. ತುಂಬಿದ ಬಿಂದಿಗೆಯಂತಿರುತ್ತಾರೆ. ಅದೇ ರೀತಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಸರಳತೆ ಮೆರೆದಿದ್ದು, ಕಾರ್ಯಕ್ರಮ ಮುಗಿಸಿ ಹೋಗುವಾಗ, ರಸ್ತೆ ಬದಿ ಮಾರಲು ಇರಿಸಿದ್ದ ಪೇರಲೆ ಹಣ್ಣು ಖರೀದಿಸಿ, ಸವಿದಿದ್ದಾರೆ. ಅಲ್ಲದೇ ಸ್ವಲ್ಪ ಖರೀದಿಯೂ ಮಾಡಿದ್ದಾರೆ.

ಈ ಬಗ್ಗೆ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೋ ಹಾಕಿ, ಬರೆದಿದ್ದು, ನಮ್ಮ ನವಲೂರ ಪ್ಯಾರ್ಲ್ ಹಣ್ಣ ( ಪೇರಳೆ ಹಣ್ಣು) ನೋಡಿ ತೊಗಳಲಾರದ ಹೋಗಲಿಕ್ಕೆ ಹೆಂಗ ಸಾಧ್ಯ..? ನಮ್ಮ ರೈತರ ಬೆಳದ ಹಣ್ಣ ನಾವ ತೊಗೊಂಡ ತಿನ್ನಲಾರದ ಇರೋದ ಅಸಾಧ್ಯ ಎಂದು ಬರೆದಿದ್ದಾರೆ.

ಅಲ್ಲದೇ ತಮ್ಮ ಮತ್ತು ಮಾರಾಟಗಾರ್ತಿಯ ನಡುವೆ ನಡೆದ ಸಂಭಾಷಣೆಯನ್ನೂ ಅವರು ಬರೆದಿದ್ದು, ಪ್ಯಾರ್ಲ್ ಹಣ್ಣ ಹೆಂಗ ಕೊಟ್ಟಿ ಅಮ್ಮಾ…. ಐವತ್ತಕ್ಕ ಎರೆಡ, ನೂರಕ್ಕ ಐದ ಕೊಡ್ತೇನಿ ತೊಗೊರಿ ಸರ್…. ಹಣ್ಣ ಸಿಹಿ ಅದಾವ ಇಲ್ಲ ಮತ್ತ… ಅಯ್ಯ..ಯಪ್ಪಾ..ನಮ್ಮ ನವಲೂರ ಹಣ್ಣ ಅಂದರ ಕೇಳ್ತಿ ಏನ..ತಿಂದರ ನೋಡ… ಹೀಗೆ ಮಾತಾನಾಡಿದ ವೀಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

ಒಟ್ಟಾರೆಯಾಗಿ, ಕೇಂದ್ರ ಸಚಿವರಾದರೂ ಬಾಲ್ಯದ ಪದ್ಧತಿ, ಸರಳ ಜೀವನವನ್ನು ಮರೆಯದ ಸಚಿವರು, ತಮ್ಮೂರ ಪೇರಳೆ ಸವಿದು ಖುಷ್ ಆಗಿದ್ದಾರೆ.

About The Author