ಚಿನ್ನವನ್ನ ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅನೇಕ ಜನರು ಚಿನ್ನವನ್ನ ಅತಿ ಹೆಚ್ಚು ಪ್ರೀತಿಸುತ್ತಾರೆ. ಅನೇಕ ಕಾರಣಗಳಿಗಾಗಿ ಖರೀದಿಸುತ್ತಲೇ ಇರುತ್ತಾರೆ. ಸಂಕ್ರಾಂತಿ ಹಬ್ಬ ಬರ್ತಾಯಿದೆ. ಜೊತೆಗೆ ಮದುವೆ ಹಬ್ಬಗಳು ಶುರುವಾಗಿದೆ. ಜನರು ಆಭರಣಗಳನ್ನ ಖರೀದಿಸುವ ಈ ಸಮಯದಲ್ಲಿ ಚಿನ್ನದ ದರದಲ್ಲಿ ಹಾವು ಏಣಿ ಆಟದಂತೆ ಬದಲಾಗುತ್ತಿದೆ.
ಡಿಸೆಂಬರ್ 15, ರಂದು ಭಾರತದಲ್ಲಿ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಜಾಗತಿಕ ಹೂಡಿಕೆದಾರರಲ್ಲಿ ಸುಮಾರು 70% ರಷ್ಟು ಜನರು ಮುಂದಿನ ವರ್ಷ ಚಿನ್ನದ ಬೆಲೆಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಇಂದು ಎಲ್ಲಾ ಶುದ್ಧತೆಯ ಮಟ್ಟಗಳಲ್ಲಿ ಇದು ಕಡಿಮೆಯಾಗಿದೆ.
ನಿನ್ನೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಬಹುತೇಕ ಅಷ್ಟೇ ಪ್ರಮಾಣದಲ್ಲಿ ಇಳಿಕೆ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ 12,350 ರೂನಿಂದ 12,270 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,386 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 199 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 211 ರೂ ಆಗಿದೆ.
ನಿನ್ನೆ 75 ರೂ ಹೆಚ್ಚಿದ್ದ ಚಿನ್ನದ ಬೆಲೆ ಇವತ್ತು 80 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ 13,400 ರೂ ಗಡಿಯೊಳಗೆ ಬಂದಿದೆ. ಆಭರಣ ಚಿನ್ನದ ಬೆಲೆಯೂ 12,300 ರೂ ಗಡಿಯೊಳಗೆ ಬಂದಿದೆ. ಬೆಳ್ಳಿ ಬೆಲೆಯೂ ನಿನ್ನೆ 3 ರೂ ಹೆಚ್ಚಳಗೊಂಡಿದ್ದು, ಇವತ್ತು ಅಷ್ಟೇ ಬೆಲೆ ತಗ್ಗಿದೆ. ಇನ್ನು ಭಾರತದಲ್ಲಿ ಬಂಗಾರದ ಬೆಲೆಗಳನ್ನ ನೋಡೋದಾದ್ರೆ ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 1,22,700 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,33,860 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 19,900 ರೂಪಾಯಿ ಇದೆ.
ಇನ್ನು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳನ್ನ ನೋಡೋದಾದ್ರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 1,22,700 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂ ಗೆ 19,900 ರೂಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 21,100 ರೂ ಇದೆ. ಆದರೂ ಕೂಡ ಚಿನ್ನದ ದರ ಹೆಚ್ಚಳದ ಹಾದಿ ಹಿಡಿದಿದೆ. 5 ವರ್ಷ ಅವಧಿಯಲ್ಲಿ ಶೇ.50 ಹೆಚ್ಚಳವಾಗಿದೆ. 2025 ರಲ್ಲಿ ಶೇ.39 ರಷ್ಟು ಏರಿಕೆಯಾಗಿದೆ. 2024ರಲ್ಲಿ ಶೇ.27ರಷ್ಟು ದರ ಏರಿಕೆಯಾಗಿ ದಾಖಲೆ ಮೇಲೆ ದಾಖಲೆ ಬರಿತಿದೆ.
ಹಾಗಾದ್ರೆ ಚಿನ್ನದ ಬೆಲೆ ಯಾಕಿಷ್ಟು ಏರಿಕೆಯಾಗುತ್ತಿದೆ? ಅಂತ ಗಮನಿಸೋದಾದ್ರೆ ಭೌಗೋಳಿಕ ರಾಜಕೀಯದ ಉದ್ವಿಗ್ನತೆ, ಜಾಗತಿಕ ಬೆಳವಣಿಗೆ ಮೇಲಿನ ಅನಿಶ್ಚಿತತೆ, ಕುಸಿತ ಕಾಣುತ್ತಿರುವ ಡಾಲರ್ ಮೌಲ್ಯ,
ಈ ಕೇಂದ್ರ ಬ್ಯಾಂಕ್‌ಗಳಿಂದ ಖರೀದಿ ಹೆಚ್ಚಳ ಹಳದಿ ಲೋಹ, ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿರುವುದು, ಬಡ್ಡಿ ದರ ಕಡಿತದಿಂದ ಚಿನ್ನ ಆಕರ್ಷಣೆ, ಬಂಗಾರದ ಪೂರೈಕೆಯಲ್ಲಿನ ಕೊರತೆಗಳೇ ಕಾರಣವಾಗಿದೆ.
ಬಂಗಾರ ಮತ್ತು ಬೆಳ್ಳಿಯಂಥ ಅಮೂಲ್ಯ ಲೋಹಗಳ ದೇಶೀಯ ಧಾರಣೆಯನ್ನು ಅವುಗಳ ಪ್ರಸ್ತುತ ಅಂತಾ ರಾಷ್ಟ್ರೀಯ ದರಗಳು, ಡಾಲರ್ ವಿರುದ್ಧ ರೂಪಾಯಿ ವಿನಿ ಮಯ ಮೌಲ್ಯ ಮತ್ತು ಅನ್ವಯವಾಗುವಂಥ ತೆರಿಗೆ, ಸುಂಕ ನಿರ್ಣಯಿಸುತ್ತವೆ. ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಅಮೂಲ್ಯ ಲೋಹಗಳ ಬೆಲೆಗಳನ್ನು ಮಾರುಕಟ್ಟೆ ಅಂಶಗಳು ನಿರ್ಣಯಿಸುತ್ತವೆ. ಅದರಲ್ಲಿ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ




