Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಕನ್ಯಾ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಬದಲಾವಣೆಯಾಗಲಿದೆ. ಅದರಲ್ಲೂ ಸರ್ಕಾರಿ ನೌಕರರಿಗೆ ಬಂಪರ್. 2026 ಕನ್ಯಾ ರಾಶಿಯವರಿಗೆ ಲಕ್ಕಿ ವರ್ಷವಾಗಿರುತ್ತದೆ. ಇನ್ನೂ ಹೆಚ್ಚಿನ ಉತ್ತಮ ಬದಲಾವಣೆಗಾಗಿ ಓಂ ಬುಧಾಯ ನಮಃ ಎನ್ನುವ ಮಂತ್ರವನ್ನು ಪ್ರತಿದಿನ ಜಪ ಮಾಡಬೇಕು.
ಇಲ್ಲವಾದಲ್ಲಿ ನವಗ್ರಹ ಸ್ತೋತ್ರದಲ್ಲಿ ಬರುವ ಬುಧನ ಶ್ಲೋಕವನ್ನಾದರೂ ಹೇಳಬೇಕು. ಇದರಿಂದ ಬುಧನ ಕೃಪೆ ನಿಮ್ಮ ಮೇಲಿರುತ್ತದೆ. ವಿಷ್ಣು ಸಹಸ್ರನಾಮ, ಓಂ ನಮೋ ನಾರಾಯಣಾಯ ಎಂಬ ಮಂತ್ರ ಕೂಡ ಜಪಿಸಬಹುದು.
ಹಸಿರು, ನೇರಳೆ ಲಕ್ಕಿ ಕಲರ್ ಆಗಿದ್ದು, ಬುಧವಾರ ಮತ್ತು ಶುಕ್ರವಾರ ಲಕ್ಕಿ ವಾರವಾಗಿದೆ. ಇನ್ನು ಲಕ್ಕಿ ನಂಬರ್ 5 ಮತ್ತು 3 ಲಕ್ಕಿ ನಂಬರ್.




