Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ತುಲಾ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಚಾಣಾಕ್ಷತನದಿಂದ, ಬುದ್ಧಿವಂತಿಕೆಯಿಂದ ವ್ಯವಹರಿಸುವ ತುಲಾ ರಾಶಿಯವರಿಗೆ 2026 ಉತ್ತಮವಾಗಿರಲಿದೆ. ಹಣಕಾಸಿನಲ್ಲಿ ಲಾಭವಾಗಲಿದೆ. ದಾಂಪತ್ಯ ಜೀವನ ಸುಧಾರಣೆಯಾಗಲಿದೆ. ಪ್ರಮುಖ ಕೆಲಸಕ್ಕೆ ಸ್ನೇಹಿತರು ಕೂಡ ನಿಮ್ಮನ್ನು ಬೆಂಬಲಿಸಲಿದ್ದಾರೆ.
ಇವರ ಲಕ್ಕಿ ನಂಬರ್ 6 ಮತ್ತು 9, ಶುಕ್ರವಾರ ಮತ್ತು ಶನಿವಾರ ಲಕ್ಕಿ ವಾರ, ಓಂ ಶ್ರೀ ಲಕ್ಷ್ಮೀಯೇ ನಮಃ ಎಂದು ಜಪ ಮಾಡಿದರೆ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.




