Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ವೃಶ್ಚಿಕ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ವೃಶ್ಚಿಕ ರಾಶಿಯವರಿಗೆ 2026 ಪರಿವರ್ತನೆಯ ವರ್ಷ. ಅವಕಾಶಗಳು ಸಿಗಲಿದೆ. ಆದರೆ ತಾಳ್ಮೆಯಿಂದ ಇರಬೇಕಾಗುತ್ತದೆ. ಅಲ್ಲದೇ ಹಿತಶತ್ರುಗಳಿಂದಲೇ ನಿಮಗೆ ಸಮಸ್ಯೆ ಕಾಡಬಹುದು. ಹಾಗಾಗಿ ಜಾಗೃತೆಯಿಂದಿರಿ. ಪಂಚಮ ಶನಿ ಇರುವ ಕಾರಣ, 2 ವರ್ಷಗಳ ಕಾಲ ನೆಮ್ಮದಿ ಕಡಿಮೆ ಇರಲಿದೆ.
ತಂದೆ-ತಾಯಿಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಹನುಮಾನ್ ಚಾಲೀಸಾ ಜಪಿಸಿ. ಲಕ್ಕಿ ನಂಬರ್ 8 ಮತ್ತು 4. ಮಂಗಳವಾರ ಮತ್ತು ಗುರುವಾರ ಶುಭದಿನ. ಕೆಂಪು ಬಣ್ಣ ಲಕ್ಕಿ ಬಣ್ಣ.




