Web News: ಯೂಟ್ಯೂಬ್ ಮಾಡಿದಾಗ ಅದರಿಂದ ನಾವು ಹೇಗೆ ಹಣ ಪಡೆಯಬಹುದು ಅನ್ನೋದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಸಬ್‌ಸ್ಕ್ರೈಬರ್ಸ್ ಹೆಚ್ಚಾದ್ರೆ ಹಣ ಬರತ್ತೆ ಅಂತಾ ಹೇಳಿದ್ರೆ, ಇನ್ನು ಕೆಲವರು ವೀವ್ಸ್ ಇದ್ರೆ ಮಾತ್ರ ಹಣ ಬರತ್ತೆ ಅಂತಾ ಹೇಳ್ತಾರೆ. ಹಾಗಾದ್ರೆ ಯೂಟ್ಯೂಬ್‌ನಿಂದ ಹಣ ಬರೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಕಲಾಹಂಸ ವೆಬ್ ಡಿಸೈನ್- ಡಿಜಿಟಲ್ ಮಾರ್ಕೇಟಿಂಗ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಚಂದನ್ ಕಲಾಹಂಸ ಅವರು ವಿವರಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ವೀವ್ಸ್ ಹೆಚ್ಚಾದ್ರೆ ಮಾತ್ರ ಹಣ ಬರುತ್ತದೆ. ಸಬ್‌ಸ್ಕ್ರೈಬರ್ಸ್ ಹೆಚ್ಚಾಗೋದಕ್ಕಿಂತ ವೀವ್ಸ್ ಹೆಚ್ಚಾಗೋದು ಮುಖ್ಯ. ಹಾಗಾದ್ರೆ ವೀವ್ಸ್ ಸಾಕಾ ಅಂದ್ರೆ, ಖಂಡಿತ ಅಲ್ಲ. ವೀವ್ಸ್ ಜತೆಗೆ ವಾಚ್ ಟೈಮ್ ಕೂಡ ಮುಖ್ಯವಾಗಿರುತ್ತದೆ.
ಯಾವ ದೇಶದಿಂದ ಎಷ್ಟು ಜನ, ಯಾವ ಸಮಯದಲ್ಲಿ ನೋಡುತ್ತಿದ್ದಾರೆ ಅನ್ನೋದು ಮುಖ್ಯವಾಗಿರುತ್ತದೆ. ಅಲ್ಲದೇ ಕಂಟೆಂಟ್ ಯಾವ ರೀತಿ ಇರುತ್ತದೆ. ಯಾವ ವಿಷಯಕ್ಕೆ ಸಂಬಂಧಿಸಿದಂತೆ ಇರುತ್ತದೆ ಅನ್ನೋದರ ಮೇಲೆ ನಿಮ್ಮ ರೆವಿನ್ಯೂ ನಿರ್ಧಾರವಾಗುತ್ತದೆ.




