Spiritual: ವೃಂದಾವನ ಅಂದ ತಕ್ಷಣ ನಮ್ಮ ನೆನಪಿಗೆ ಬರುವ ದೇವರು ಅಂದ್ರೆ ಶ್ರೀಕೃಷ್ಣ. ವೃಂದಾವನದಲ್ಲಿ ಶ್ರೀಕೃಷ್ಣ ರಾಧೆಯ ಜತೆ ನೆಲೆಸಿದ್ದಾನೆ. ಆದರೆ ನಿಮಗೆ ಅಲ್ಲಿ ಬರೀ ಶ್ರೀಕೃಷ್ಣನ ಮೂರ್ತಿ ಮಾತ್ರ ಕಾಣಿಸುತ್ತದೆ. ಅದೂ ಕೂಡ ಬಾಲಕೃಷ್ಣನ ರೂಪದಲ್ಲಿ. ಆದರೆ ಅಲ್ಲಿ ರಾಧಾ-ಕೃಷ್ಣ ಇಬ್ಬರೂ ನೆಲೆಸಿದ್ದಾರೆ ಅಂತಲೇ ಹೇಳಲಾಗುತ್ತದೆ.
ಎಲ್ಲ ದೇವಸ್ಥಾನಕ್ಕೆ ಹೋದಾಗ ನೀವು ಗಂಟೆ ಬಾರಿಸಿ ದೇವರ ದರ್ಶನಕ್ಕೆ ಹೋಗುತ್ತೀರಿ. ಆದರೆ ವೃಂದಾವನದ ಬಾಕೆ ಬಿಹಾರಿ ದೇವಸ್ಥಾನದಲ್ಲಿ ಗಂಟೆ ಬಳಕೆ ಮಾಡುವುದಿಲ್ಲ. ಇಲ್ಲಿ ಹೋದಾಗ, ರಹಸ್ಯಮಯ ಮೌನ ನಿಮ್ಮನ್ನು ಆವರಿಸುತ್ತದೆ.
ಏಕೆಂದರೆ ಇಲ್ಲಿ ಬಾಲಕೃಷ್ಣನನ್ನು ಪೂಜಿಸಲಾಗುತ್ತಿದ್ದು. ಆತ ಸಣ್ಣ ಪೋರನಾಗಿರುವ ಕಾರಣ, ಗಂಟೆ ಶಬ್ದದಿಂದ ಆತ ಹೆದರಬಹುದು ಎಂದು ಗಂಟೆ ಬಳಸುವುದಿಲ್ಲ ಎನ್ನಲಾಗಿದೆ. ಅಲ್ಲದೇ ಇಲ್ಲಿ ಮಂಗಳಾರತಿ ಕೂಡ ಮಾಡಲಾಗುವುದಿಲ್ಲ. ಏಕೆಂದರೆ, ಬಾಲಕೃಷ್ಣ ನೆಮ್ಮದಿಯಾಗಿ ನಿದ್ರಿಸಲಿ ಎಂದು.
ಇನ್ನು ಭಕ್ತರಿಗೆ ಕೃಷ್ಣ ದರ್ಶನವಾಗುತ್ತಿರುವಾಗಲೇ, ಸ್ವಲ್ಪ ಸ್ವಲ್ಪ ಸಮಯ ಪರದೆ ಮುಚ್ಚಲಾಗುತ್ತದೆ. ಏಕೆಂದರೆ ಈ ಮುಂಚೆ ದೇವರು ಅವನ ಭಕ್ತರ ಭಕ್ತಿ, ಭಾವಕ್ಕೆ ಮೆಚ್ಚಿ ದೇವಸ್ಥಾನದಿಂದ ಭಕ್ತರ ಜತೆ ಹೋಗುವಂಥ ಘಟನೆ ನಡೆದಿತ್ತಂತೆ. ಹಾಗಾಗಿ ಪದೇ ಪದೇ ಪರದೆ ಮುಚ್ಚಲಾಗುತ್ತದೆ.




