Web News: ಶ್ರೀಮಂತರಾಗಬೇಕು ಅಂತಾ ಎಲ್ಲರಿಗೂ ಆಸೆ ಇರುತ್ತೆ. ಆದರೆ ಅದು ಎಲ್ಲರ ಜೀವನದಲ್ಲಿ ಈಡೇರುವುದಿಲ್ಲ. ಕಾರಣ, ಅವರು ಜೀವನದಲ್ಲಿ ಕೆಲವು ರೂಲ್ಸ್ ಫಾಲೆೋ ಮಾಡಲ್ಲ. ಮತ್ತು ಕೆಲವು ಶಿಸ್ತು ಕ್ರಮಗಳನ್ನು ಪಾಲಿಸುವುದಿಲ್ಲ. ಹಾಗಾಗಿ ಮಧ್ಯಮ ವರ್ಗದವರು ಮಾಡುವ ತಪ್ಪುಗಳಾದ್ರೂ ಏನು ಅಂತಾ ತಿಳಿಯೋಣ ಬನ್ನಿ.
ಎಮರ್ಜನ್ಸಿ ಫಂಡ್ ಇಲ್ಲದಿರುವುದು: ಪ್ರತೀ ಮನುಷ್ಯನ ಬಳಿಯೂ ಎಮರ್ಜನ್ಸಿ ಫಂಡ್ ಅನ್ನೋದು ಇರಬೇಕು. ಅನುಭವ ಇರುವುವವರು ಹೇಳುವುದೇನೆಂದರೆ, ಪ್ರತೀ ಮನುಷ್ಯನ ಬಳಿ ಅವನ ಮೂರು ತಿಂಗಳ ಖರ್ಚು ಎಮರ್ಜನ್ಸಿ ಫಂಡ್ ಆಗಿರಬೇಕು. ಇಲ್ಲವಾದಲ್ಲಿ, ಸಾಲ ಮಾಡುವ ಪರಿಸ್ಥಿತಿ ಬರಬಹುದು. ಹಾಗಾಗಿ ಹಣವನ್ನು ಅನವಶ್ಯಕವಾಗಿ ಖರ್ಚು ಮಾಡದೇ, ಪರಿಹಾರವಾಗಿ ಇರಿಸಿಕ“ಳ್ಳಿ.
ಹೂಡಿಕೆಗೆ ತಡ ಮಾಡುವುದು: ನಿಮಗೆ 25ನೇ ವಯಸ್ಸಿಗೆ ಕೆಲಸ ಸಿಕ್ಕರೆ, ನೀವು ಆಗಿನಿಂದಲೇ ಹೂಡಿಕೆ ಮಾಡಲು ಶುರು ಮಾಡಬೇಕು. ಏಕೆಂದರೆ, ನೀವು ಎಷ್ಟು ಲೇಟ್ ಮಾಡುತ್ತೀರೋ, ಅಷ್ಟು ಸಮಯ ವ್ಯರ್ಥವಾಗುತ್ತದೆ. ನಂತರ ಹೂಡಿಕೆ ಮಾಡಿದರೂ ನಿಮಗೆ ಅಂಥ ಲಾಭವೇನು ಬರುವುದಿಲ್ಲ. ಹಾಗಾಗಿ ನಿಮಗೆ ಕೆಲಸ ಸಿಕ್ಕ ತಕ್ಷಣದಿಂದಲೇ ಕಡಿಮೆ ಹಣವಾದರೂ ಸರಿ ಹೂಡಿಕೆ ಮಾಡಿ. ವರ್ಷ ವರ್ಷ ನಿಮ್ಮ ಸಂಬಳ ಹೆಚ್ಚಾದಂತೆ, ನಿಮ್ಮ ಹೂಡಿಕೆ ಹೆಚ್ಚಿಸಿ, ಲಾಭ ಪಡೆಯಿರಿ.
ಇನ್ಶುರೆನ್ಸ್ ಮಾಡಿಸದಿರುವುದು: ಪ್ರತೀ ಮನುಷ್ಯನಿಗೂ ಇನ್ಶುರೆನ್ಸ್ ಅನ್ನೋದು ತುಂಬಾ ಮುಖ್ಯ. ಹೆಲ್ತ್ ಇನ್ಶುರೆನ್ಸ್ ಮತ್ತು ಟರ್ಮ್ ಇನ್ಶುರೆನ್ಸ್. ಇವೆರಡನ್ನೂ ನೀವು ಮಾಡಿಸಿರಲೇಬೇಕು. ಅದರಲ್ಲೂ ನಿಮ್ಮಿಂದ ನಿಮ್ಮ ಸಂಸಾರ ನಡೆಯುತ್ತಿದೆ ಎಂದಾದಲ್ಲಿ, ಮನೆ ಜವಾಬ್ದಾರಿ ಪೂರ್ತಿ ನಿಮ್ಮ ಮೇಲಿದೆ ಎಂದಲ್ಲಿ ನೀವು ಈ ಎರಡೂ ಇನ್ಶುರೆನ್ಸ್ ಮಾಡಿರಲೇಬೇಕು. ಇದರಿಂದ ನಿಮ್ಮ ಮನೆ ಮಂದಿ ಹಣಕಾಸಿನ ಸಮಸ್ಯೆಯಿಂದ ಬಳಲುವುದು ತಪ್ಪುತ್ತದೆ.
ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸುವುದು: ಕ್ರೆಡಿಟ್ ಕಾರ್ಡ್ ಬಳಸೋ ಶೋಕಿ ಇಂದಿನ ಕಾಲದಲ್ಲಂತೂ ಹಲವರಿಗಿದೆ. ಕ್ರೆಡಿಟ್ ಕಾರ್ಡ್ ಬಳಸೋದು, ಪ್ರವಾಸಕ್ಕೆ ಹೋಗೋದು. ಕ್ರೆಡಿಟ್ ಕಾರ್ಡ್ ಬಳಸೋದು ಅನವಶ್ಯಕ ವಸ್ತು ಖರೀದಿಸೋದು. ಇದೆಲ್ಲವೂ ನಿಮ್ಮ ಆರ್ಥಿಕ ಸಮಸ್ಯೆ ಹೆಚ್ಚಿಸಿ, ನಿಮ್ಮನ್ನು ಬೀದಿಗೆ ತಂದು ನಿಲ್ಲಿಸಬಹುದು. ಹಾಗಾಗಿ ಕ್ರೆಡಿಟ್ ಕಾರ್ಡ್ ಬಗ್ಗೆ ಎಚ್ಚರದಿಂದಿರಿ.
ಬಜೆಟ್ ಮಾಡದಿರುವುದು: ಪ್ರತೀ ತಿಂಗಳು ಎಷ್ಟು ಖರ್ಚಾಯ್ತು? ಯಾಕೆ ಖರ್ಚಾಯ್ತು? ಎಲ್ಲಿ ಖರ್ಚಾಯ್ತು..? ಹೀಗೆ ಎಲ್ಲವನ್ನೂ ನೀವು ಬಜೆಟ್ ಮಾಡಲೇಬೇಕು. ಇಲ್ಲವಾದಲ್ಲಿ ಹಣ ನೀರಿನಂತೆ ಖರ್ಚಾಗುತ್ತದೆ.




