ಡಬಲ್ ಡ್ಯೂಟಿ ಮಾಡಿದ್ರು ಸಿಕ್ಕಿಲ್ಲ ಹಣ: ಶಿಕ್ಷಕರಿಗೆ 20 ಸಾವಿರ ಬಾಕಿ

ಒಳಮೀಸಲಾತಿ ಹಾಗೂ ಜಾತಿ–ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ನಿರ್ವಹಿಸಿದ ಶಿಕ್ಷಕರಿಗೆ ರಾಜ್ಯ ಸರ್ಕಾರ ಈವರೆಗೂ ಘೋಷಿತ ಗೌರವಧನವನ್ನು ಬಿಡುಗಡೆ ಮಾಡಿಲ್ಲ. ಪ್ರತಿ ಶಿಕ್ಷಕರಿಗೆ ಕನಿಷ್ಠ 15 ಸಾವಿರದಿಂದ 20 ಸಾವಿರ ರೂಪಾಯಿ ವರೆಗೆ ಗೌರವಧನ ಬಾಕಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ನಡೆದ ಒಳಮೀಸಲಾತಿ ಹಾಗೂ ಪರಿಶಿಷ್ಟ ಜಾತಿ ಸಮೀಕ್ಷೆ ಕಾರ್ಯದಲ್ಲಿ, ಹತ್ತಾರು ಹೊಣೆಗಾರಿಕೆಗಳ ನಡುವೆಯೂ ಶಿಕ್ಷಕರು ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದು ಕೇವಲ ಇತ್ತೀಚಿನ ಸಮೀಕ್ಷೆಯಷ್ಟೇ ಅಲ್ಲ. ಹಿಂದೆ ಒಳಮೀಸಲಾತಿಗಾಗಿ ನಡೆದ ಪರಿಶಿಷ್ಟ ಜಾತಿ ಸಮೀಕ್ಷೆ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೂ ಇಂದಿಗೂ ಗೌರವಧನ ತಲುಪಿಲ್ಲ ಎನ್ನುವುದು ಬೇಸರದ ವಿಚಾರ.

ರಾಜ್ಯ ಸರ್ಕಾರ ಬೋಧನಾ ಕಾರ್ಯದ ಜೊತೆಗೆ ಶಿಕ್ಷಕರ ಮೇಲೆ ಬಿಸಿಯೂಟ ಯೋಜನೆ, ಚುನಾವಣೆ ಕರ್ತವ್ಯ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಜಾತಿ ಸಮೀಕ್ಷೆ, ಜನಗಣತಿ ಸೇರಿದಂತೆ ಅನೇಕ ಹೊಣೆಗಾರಿಕೆಗಳನ್ನು ಹೊರಿಸುತ್ತಿದೆ. ಗರ್ಭಿಣಿಯರು, ಅನಾರೋಗ್ಯ ಪೀಡಿತರು ಎನ್ನದೆ ಎಲ್ಲ ಶಿಕ್ಷಕರನ್ನೂ ಚುನಾವಣೆ ಕರ್ತವ್ಯಕ್ಕೆ ಕಡ್ಡಾಯವಾಗಿ ನಿಯೋಜಿಸಲಾಗುತ್ತದೆ. ವಿನಾಯಿತಿ ಕೇಳಿದರೂ ಯಾವುದೇ ಕಾರಣಕ್ಕೂ ಬಿಡುಗಡೆ ಇಲ್ಲ ಎಂಬ ಕಟ್ಟುನಿಟ್ಟಿನ ನಿಲುವನ್ನು ಸರ್ಕಾರ ತೋರಿಸಿದೆ.

ಸರ್ಕಾರ ಪ್ರತಿ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳುವ ಪ್ರತಿ ನೌಕರರಿಗೂ 100 ರೂ. ಗೌರವಧನ ನೀಡುವುದಾಗಿ ತಿಳಿಸಿತ್ತು. ಅದರ ಜತೆಗೆ ಸರ್ಕಾರ ಶಾಲೆಗಳ ಶಿಕ್ಷಕರಿಗೆ 5 ಸಾವಿರ ರೂ. ವಿಶೇಷ ಭಕ್ತಿ ಕಡ್ಡಾಯವಾಗಿ ನೀಡುವುದಾಗಿ ತಿಳಿಸಿತ್ತು. ಪ್ರತಿ ಶಿಕ್ಷಕರಿಗೆ ಕನಿಷ್ಟ 50 ರಿಂದ 150 ಮನೆಗಳವರೆಗೂ ಸಮೀಕ್ಷೆಗೆ ಹೊಣೆ ನೀಡಲಾಗಿತ್ತು. ಒಬ್ಬ ನೌಕರರು ಕನಿಷ್ಟ ನೂರು ಮನೆಗಳ ಸಮೀಕ್ಷೆ ಮಾಡಿದ್ದಾರೆ. ಸರ್ಕಾರದ ಕಡ್ಡಾಯ ಭತ್ಯೆ ಸೇರಿದಂತೆ 15 ರಿಂದ 20 ಸಾವಿರ ರೂ. ಬರಬೇಕಿದೆ.

ಡಬಲ್ ಕೆಲಸಮಾಡಿದರು ಸಾಮಾಜಿಕ ಶೈಕ್ಷಣಿಕ ಕಾರ್ಯಕ ಅಂಗನವಾಡಿ ಶಿಕ್ಷಕಿಯರನ್ನು ಬಳಸಿಕೊಳ್ಳಲಾಯಿತು. ಮೊದಲ ಹಂತದಲ್ಲಿ ಎಲ್ಲರ ಜತೆಗೂಡಿ ಕೆಲಸ ಮಾಡಿದರು. ಸರ್ಕಾರಿ ಶಾಲೆಗಳ ಶಿಕ್ಷಕರಷ್ಟೇ ಕೆಲಸ ಮಾಡಿದರೂ ಇವರಿಗೆ 5 ಸಾವಿರ ರೂ. ಕಡ್ಡಾಯ ಭತ್ಯೆ ನೀಡುವ ಭರವಸೆ ಬದಲಿಗೆ ಪತಿ ಮನೆಗೆ 100 ರೂ. ಮಾತ್ರ ನೀಡುವುದಾಗಿ ತಿಳಿಸಲಾಗಿತ್ತು.

ಸಮೀಕ್ಷೆ ಮುಗಿದ ಬಳಿಕ ಅದು ಸರಿಯಾಗಿ ನಡೆದಿಲ್ಲ ಎಂದು ಅಂಗನವಾಡಿ ಶಿಕ್ಷಕಿಯರನ್ನು ಎರಡನೆ ಬಾರಿಗೆ ಸಮೀಕ್ಷೆ ಕೈಗೊಳ್ಳಲಾಯಿತು. ಕೆಲಸ ಮಾಡಿಸಿಕೊಂಡ ಸರ್ಕಾರ ಈವರೆಗೂ ಅವರಿಗೆ ಎಷ್ಟೋ ಶಿಕ್ಷಕರು ಗೌರವಧನ ಬಿಡುಗಡೆ ಮಾಡಿಲ್ಲ.

ವರದಿ : ಲಾವಣ್ಯ ಅನಿಗೋಳ

About The Author