Mandya News: ಮಂಡ್ಯ: ಮಂಡ್ಯದಲ್ಲಿ ಆಸ್ತಿ ಕಬಳಿಕೆಗಾಗಿ ಸಂಚು ನಡೆಸಿ 15ಕ್ಕೂ ಹೆಚ್ಚು ಜನ ಮನೆ ಮೇಲೆ ದಾಳಿ ಮಾಡಿ ಕಾಂಪೌಂಡ್ ಧ್ವಂಸ ಮಾಡಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾ. ಕೃಷ್ಣಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಕೃಷ್ಣಾಪುರ ನಿವಾಸಿ ಚಂದ್ರಶೇಖರ ಹಲ್ಲೆಗೊಳಗಾದ ಬಡಕುಟುಂಬವಾಗಿದೆ. ಚೌಡೇನಹಳ್ಳಿ ನಿವಾಸಿ ಶಂಕರ್ ಸೇರಿ 15ಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಲಾಗಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ರೀತಿ ಹಲವು ಬಾರಿ ಬೆದರಿಕೆ ಹಾಕಿದ್ದು, ಹಲವು ಬಾರಿ ಪೊಲೀಸರಿಗೆ ದೂರು ಕೊಟ್ಟರೂ ಪೋಲೀಸರು ಮಾತ್ರ ಇದುವರೆಗೂ ಕ್ರಮ ಕೈಗ“ಳ್ಳಲಿಲ್ಲವೆಂಬ ಆರೋಪ ಕೇಳಿಬಂದಿದೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



