ಜಮೀನು ಮಾಲೀಕತ್ವಕ್ಕಾಗಿ ಮಾಜಿ ಶಾಸಕರ ಕುಟುಂಬ ಸದಸ್ಯರಿಂದ ವಕೀಲನ ಹಲ್ಲೆ, ಕೊಲೆ ಯತ್ನ ಆರೋಪ

Mandya News: ಮಾಜಿ ಶಾಸಕ ಹಾಗು ಕುಟುಂಬ ಸದಸ್ಯರಿಂದ ವಕೀಲ ನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಈ ಘಟನೆ ನಡೆದಿದೆ.

ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗು ಪುತ್ರ ಶ್ರೀಕಾಂತ್ ಸೇರಿ ಅವರ ಕುಟುಂಬ ಸದಸ್ಯರಿಂದ ದೌರ್ಜನ್ಯ ನಡೆದಿದ್ದು, ಜಮೀನು ಮಾಲೀಕತ್ವ ವಿಚಾರಕ್ಕೆ ಪಟ್ಟಣದ ವಕೀಲ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಜಮೀನು ಬಿಟ್ಟುಕೊಡಲು ಒಪ್ಪದ ವಕೀಲನ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಸದ್ಯ ಗಾಯಾಳು ವಕೀಲರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ವಕೀಲರು, ತನಗೆ ಹೆಚ್ಚು ಕಡಿಮೆ ಆದರೆ ಅದಕ್ಕೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕಾರಣ ಎಂದು ಹೇಳಿದ್ದು, ಮಾಜಿ ಶಾಸಕ ಹಾಗು ಅವರ ಕುಟುಂಬ ಸದಸ್ಯರ ವಿರುದ್ದ K.R.ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

About The Author