Health Tips: ಕೆಲವರು ಎಷ್ಟು ಊಟ ಮಾಡಿದ್ರೂ, ಏನೇ ತಿಂದರೂ, ಚೆನ್ನಾಗಿ ನಿದ್ರೆ ಮಾಡಿದ್ರೂ ಸುಸ್ತಾದವರಂತೆ ಇರುತ್ತಾರೆ. ಏಕೆಂದರೆ ಅವರ ದೇಹದಲ್ಲಿ ಶಕ್ತಿ ಇರುವುದಿಲ್ಲ. ಹಾಗಾದ್ರೆ ದೇಹದಲ್ಲಿ ಶಕ್ತಿ ಬಂದು, ಚೈತನ್ಯದಾಯಕರಾಗಿರಬೇಕು ಅಂದ್ರೆ ನೀವು ಕೆಲ ಆಹಾರಗಳನ್ನು ಸೇವಿಸಬೇಕು.
ನಾವೇನೇ ತಿಂದರೂ ನಮ್ಮ ದೇಹದಲ್ಲಿ ಶಕ್ತಿ ಅಡಗುವುದಕ್ಕೆ ಕಾರಣ, ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು. ಇದು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಅಂದ್ರೆ ನಾವು ಉತ್ತಮ ಆಹಾರವನ್ನೇ ಸೇವಿಸಬೇಕು.
ಕೌಂಚಬೀಜದ ಸೇವನೆ: ನಾವು ಕೌಂಚ ಬೀಜದ ಸೇವನೆ ಮಾಡಿದ್ದಲ್ಲಿ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಅರ್ಧ ಚಮಚ ಕೌಂಚಬೀಜದ ಪುಡಿಯನ್ನು ಬಿಸಿ ಹಾಲಿಗೆ ಹಾಕಿ, ಬೆಳಿಗ್ಗೆ ಸೇವನೆ ಮಾಡಬೇಕು. ಇದರಿಂದ ನಮ್ಮ ದೇಹದಲ್ಲಿರುವ ಹ್ಯಾಪಿ ಹಾರ್ಮೋನ್ ಆ್ಯಕ್ಟೀವ್ ಆಗುತ್ತದೆ.
ಡಾರ್ಕ್ ಚಾಕ್ಲೇಟ್ ಮತ್ತು ಬಾಳೆಹಣ್ಣಿನ ಸ್ಮೂದಿ: ಮನೆಯಲ್ಲೇ ನೀವು ಡಾರ್ಕ್ ಚಾಕೋಲೇಟ್ ಮತ್ತು ಬಾಳೆಹಣ್ಣು, ಹಾಲು ಸೇರಿಸಿ, ಸ್ಮೂದಿ ತಯಾರಿಸಬಹುದು. ಇದರ ಸೇವನೆಯಿಂದಲೂ ನಾವು ಆರೋಗ್ಯವಾಗಿ, ಚೈತನ್ಯದಾಯಕರಾಗಿರಬಹುದು. ನೀವು ಇಲ್ಲಿ ಡಾರ್ಕ್ ಚಾಕ್ಲೇಟ್ ಬದಲು ಕೋಕೋ ಪುಡಿ ಬಳಸಬಹುದು.
ಎಳ್ಳಿನ ಚಿಕ್ಕಿ ಅಥವಾ ಉಂಡೆ ಸೇವನೆ: ಪ್ರತಿದಿನ 1 ಎಳ್ಳಿನ ಚಿಕ್ಕಿ ಅಥವಾ ಎಳ್ಳಿನ ಲಡ್ಡು ಸೇವನೆ ಮಾಡಿ. ಮತ್ತು ಬೆಳಗ್ಗಿನ ತಿಳಿ ಬಿಸಿಲಿಗೆ ನಿಂತು ವಿಟಾಮಿನ್ ಡಿ ಸೇವಿಸಿ. ಇದರಿಂದ ನಿಮ್ಮ ದೇಹ ಚೈತನ್ಯದಾಯವಾಗಿರುತ್ತದೆ. ನೀವು ಶಕ್ತಿವಂತರೂ ಆಗಿರುತ್ತೀರಿ.




