ಅಜೀತ್ ಧೋವಲ್ ಗೂಢಾಚಾರಿಯಾಗಿ ಪಾಕಿಸ್ತಾನಕ್ಕೆ ಹೋದಾಗ ನಡೆದಿತ್ತು ಈ ರೋಚಕ ಘಟನೆ

National Politics: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಧೋವಲ್ ಅವರು ಪಾಕಿಸ್ತಾನದಲ್ಲಿ 5 ವರ್ಷ ಗೂಢಾಚಾರಿಯಾಗಿ ಹೋದಾಗ, ಅವರನ್ನು ಓರ್ವ ವ್ಯಕ್ತಿ ಗುರುತು ಹಿಡಿದಿದ್ದನಂತೆ. ಆಗ ಅಜೀತ್ ಧೋವಲ್ ಏನು ಮಾಡಿದ್ರು, ಏನೆಂದು ಉತ್ತರಿಸಿದರು ಅಂತಾ ಅವರೇ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಧುರಂಧರ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಅಜೀತ್ ಧೋವಲ್ ಅವರ ಪಾತ್ರವನ್ನು ಆರ್.ಮಾಧವನ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗಾಗಿ ಅಜೀತ್ ಧೋವಲ್‌ಗೆ ಸಂಬಂಧಿಸಿದ ವೀಡಿಯೋ ತುಣುಕುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಂಥ ವೀಡಿಯೋದಲ್ಲಿ 1 ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ತಾನು ಪಾಕಿಸ್ತಾನಕ್ಕೆ ಹೋದಾಗ, ಅಲ್ಲಿ ನಡೆದ ಘಟನೆ ಬಗ್ಗೆ ಅಜೀತ್ ವಿವರಿಸಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಓರ್ವ ವ್ಯಕ್ತಿ ಇವರನ್ನು ಕರೆದು ನೀವ್ಯಾರು ಎಂದು ಕೇಳಿದ್ದರಂತೆ. ಆಗ ಅಜೀತ್ ತನ್ನ ಹೆಸರು ಬದಲಾಯಿಸಿ ಹೇಳಿದ್ದರಂತೆ.

ಆದರೆ ಆ ವ್ಯಕ್ತಿ ನೀವು ಹಿಂದೂ ತಾನೇ ಅಂತಾ ಕೇಳಿದ್ದನಂತೆ. ಆಗ ಅಜೀತ್ ಇಲ್ಲ ತಾನು ಮುಸ್ಲಿಂ ಅಂತಲೇ ಹೇಳಿದ್ದರಂತೆ. ಆಗ ಆ ವ್ಯಕ್ತಿ 1 ಕೋಣೆಗೆ ಅಜೀತ್‌ರನ್ನು ಕರೆದುಕ“ಂಡು ಹೋಗಿ, ನೀನು ಹಿಂದೂ ಅಂತಾ ನನಗೆ ತಿಳಿದಿದೆ. ಏಕೆಂದರೆ ನಿನ್ನ ಕಿವಿಯಲ್ಲಿ ಹೋಲ್ ಇದೆ. ಈ ರೀತಿ ಮುಸ್ಲಿಂರು ಕಿವಿ ಚುಚ್ಚಿಸಿಕ“ಳ್ಳುವುದಿಲ್ಲ.

ಹಾಗಾಗಿ ನೀನು ನಿನ್ನ ಕಿವಿ ಆಪರೇಷನ್ ಮಾಡಿಸಿಕೋ ಎಂದಿದ್ದರಂತೆ. ಆಗ ವಿಧಿ ಇಲ್ಲದೇ ಅಜೀತ್ ಧೋವಲ್ ತಾವು ಹಿಂದೂ ಅನ್ನೋದನ್ನು ಒಪ್ಪಿಕ“ಂಡಿದ್ದರಂತೆ. ಅಲ್ಲದೇ ಆ ವ್ಯಕ್ತಿ ಅಜೀತ್ ಧೋವಲ್ ಹಿಂದೂ ಅಂತಾ ಕಂಡು ಹಿಡಿದಿದ್ದು ಹೇಗೆ ಎಂದರೆ ಆತ ಕೂಡ ಹಿಂದೂವಾಗಿದ್ದ.

ತನ ಪರಿವಾರವನ್ನು ಪಾಕಿಸ್ತಾನಿಗಳು ಹತ್ಯೆ ಮಾಡಿದ್ದರು. ಆದರೆ ಈಗ ತಾನು ಮುಸ್ಲಿಂ ಆಗಿ ಇಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಇದೆ. ನಿಮ್ಮಂಥವರನ್ನು ನೋಡಿದಾಗ ನನಗೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದನಂತೆ. ಭಾರತಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುವ ಅಜೀತ್ ಧೋವಲ್, ಸೈನಿಕರಂಥ ರಾಷ್ಟ್ರಪ್ರೇಮಿಗಳು ನಿಜಕ್ಕೂ ಗ್ರೇಟ್.

About The Author