Mandya News: ಶಾಲೆಯಲ್ಲಿ ಬಲವಂತವಾಗಿ ಜೈನ ವಿದ್ಯಾರ್ಥಿಗೆ ಮೊಟ್ಟೆ ಹಾಕಿದ ಕೇಕ್ ತಿನ್ನಿಸಿದ ಆರೋಪ

Mandya News: ಮಂಡ್ಯ: ಜೈನ‌ ಸಮುದಾಯದ ವಿದ್ಯಾರ್ಥಿಗೆ ಬಲವಂತವಾಗಿ ಮೊಟ್ಟೆ ಮಿಶ್ರಿತ ಕೇಕ್ ತಿನ್ನಿಸಿ ಕ್ರಿಶ್ಚಿಯನ್ ಶಾಲೆಯಿಂದ ಅಪಮಾನ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಪೋದಾರ್ ಶಾಲೆಯ ವಿರುದ್ಧ ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಲವಂತವಾಗಿ ನಮ್ಮ ಮಗನಿಗೆ ಕೇಕ್ ತಿನ್ನಿಸಿ ಅಪಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ವಿದ್ಯಾರ್ಥಿ ಜೈನ ಸಮುದಾಯದವನಾಗಿದ್ದು, ಜೈನರು ಎಗ್ ಸೇರಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಆದರೆ ಪೋದಾರ್ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಮಾಡಲಾಗುತ್ತಿದ್ದು, ಹಬ್ಬದ ನೆಪದಲ್ಲಿ ಕೇಕ್ ತಿನ್ನಿಸಲಾಗಿದೆಯಂತೆ. ಕೇಕ್‌ನಲ್ಲಿ ಎಗ್ ಹಾಕಲಾಗಿದ್ದು, ಆ ಕೇಕ್‌ನ್ನು ನನ್ನ ಮಗನಿಗೆ ನೀಡಲಾಗಿದೆ ಎಂದು ಆರೋಪಿಸಿ, ವಿದ್ಯಾರ್ಥಿಯ ಪೋಷಕರು, ಶಾಲೆಯ ಆಡಳಿತ ಮಂಡಳಿ ಮೇಲೆ ಆರೋಪಿಸಿದ್ದಾರೆ.

ಅಲ್ಲದೇ ಇಲ್ಲಿ ಕ್ಲಿಸ್‌ಮಸ್‌ ಹಬ್ಬವನ್ನು ಮಾತ್ರ ಮಾಡುತ್ತಾರೆ. ಹಿಂದೂಗಳ ಹಬ್ಬದ ಬಗ್ಗೆ ಪ್ರಶ್ನಿಸಿದರೆ, ದಬ್ಬಾಳಿಕೆ ಆರೋಪ ಮಾಡ್ತಾರೆ ಎಂದು ಪೋಷಕರು ಆರೋಪಿಸಿದ್ದಾರೆ.

About The Author