Tumakuru News: ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವ್ಯಕ್ತಿಗೆ ಗಂಭೀರ ಗಾಯ

Tumakuru News: ತುಮಕೂರು: ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರಿನ ಗಾಂಧಿನಗರ ಕೆರಗೋಡಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಾಜಿ ನಗರಸಭೆ ಸದಸ್ಯ ಇಮ್ರಾನ್ ಮತ್ತು ಬೆಂಬಲಿಗರು ಬೇರೆ ಗುಂಪಿನ ಯುವಕರ ಜತೆ ಗಲಾಟೆ ಮಾಡಿ, ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಗಲಾಟೆಯಲ್ಲಿ ಅಲಿ ಎಂಬಾತನ ತಲೆಗೆ ಪೆಟ್ಟು ಬಿದ್ದು ಗಂಭೀರ ಗಾಯವಾಗಿದ್ದು, ಗಾಯಾಳು ಅಲಿ ಗೆ ಹಾಸನ ಆಸ್ಪತ್ರೆಗೆ ದಾಖಲಿಸಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 2 ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ, ಗಾಯಾಳು ಅಲಿ ಹಾಗೂ ಕಾಂಗ್ರೆಸ್ ನ ಮಾಜಿ ನಗರಸಭಾ ಸದಸ್ಯ ಇಮ್ರಾನ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದ್ದು, ಹಳೆ ವೈಷಮ್ಯ ಅಲಿ ಮೇಲೆ ಹಲ್ಲೆ ಗೆ ಕಾರಣ ಎನ್ನಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಾಗಿದೆ.

About The Author