ಅನಿರೀಕ್ಷಿತವಾಗಿ ನಿರ್ಮಾಪಕಿಯಾದರಂತೆ ರೂಪಾ ಅಯ್ಯರ್: Podcast

Sandalwood: ನಿರ್ದೇಶಕಿ ರೂಪಾ ಅಯ್ಯರ್ ಮಾಡಿರುವ ಪ್ರಥಮ ಸಿನಿಮಾ ಅಂದ್ರೆ ಅದು ದಾಟು ಸಿನಿಮಾ. ಈ ಸಿನಿಮಾದ ನಟನೆ ಮತ್ತು ನಿರ್ಮಾಣ ಎರಡೂ ರೂಪಾ ಅವರೇ ಮಾಡಿದ್ದು. ಈ ಸಿನಿಮಾ ರಿಲೀಸ್ ಮಾಡುವಾಗ ಏನೇನಾಯ್ತು ಅನ್ನೋದನ್ನು ರೂಪಾ ಅವರು ವಿವರಿಸಿದ್ದಾರೆ.

ರೂಪಾ ಅವರು ದಾಟು ಸಿನಿಮಾದಲ್ಲಿ ಅಭಿನಯಿಸುವಾಗ, ಸಿನಿಮಾ ನಿರ್ಮಾಪಕರು ಅರ್ಧಕ್ಕೆ ಸಿನಿಮಾ ನಿಲ್ಲಿಸಿ, ಸಿನಿಮಾದಿಂದ ಆಚೆ ನಡೆದಿದ್ದರು. ಹಾಗಾಗಿ ಸಿನಿಮಾಗೆ ಹಣ ಹಾಕುವವರ ಅವಶ್ಯಕತೆ ಇದ್ದ ಕಾರಣ, ರೂಪಾ ಅವರು ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದರಂತೆ.

ಇನ್ನು ನಿರ್ದೇಶಕಿಯಾಗಿದ್ದಾಗ ರೂಪಾ ಅವರು ಸಿನಿಮಾ ನಿರ್ದೇಶನ ಮಾಡಲು ತುಂಬಾ ಕಷ್ಟಪಟ್ಟಿದ್ದರಂತೆ. ರೂಪಾ ಅವರು ಮಂಡ್ಯದವರಗಿದ್ದರೂ ಕೂಡ, ಅವರ ಚಂದ್ರ ಸಿನಿಮಾವನ್ನು ಅಲ್ಲೇ ರಿಲೀಸ್ ಮಾಡಲು ಅವರು ಸಾಕಷ್ಟು ಸಮಸ್ಯೆ ಎದುರಿಸಿದ್ದರಂತೆ. ಮಂಡ್ಯದಲ್ಲಿ ಚಂದ್ರ ಸಿನಿಮಾ ರಿಲೀಸ್ ಮಾಡಿದ್ದ ದಿನವೇ, ವೀಕ್ಷಕರು ಕಡಿಮೆ ಎಂದು ಸಿನಿಮಾ ತೆಗೆದು ತಮಿಳು ಸಿನಿಮಾ ಹಾಕಿದ್ದರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author