ಕರೊನಾ ಮಹಾಮಾರಿ ಬಳಿಕ ಸಂಚಾರ ನಿಲ್ಲಿಸಿದ್ದ ಸಾಮಾನ್ಯ ರೈಲು ಸೇವೆ ಯಾವಾಗ ಆರಂಭವಾಗುತ್ತೆ ಅನ್ನೋ ಪ್ರಶ್ನೆ ಪ್ರಯಾಣಿಕರಲ್ಲಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಐಆರ್ಸಿಟಿಸಿ ಇಲಾಖೆ ಸೆಪ್ಟೆಂಬರ್ನಲ್ಲಿ ರೆಗ್ಯೂಲರ್ ಟ್ರೇನ್ ಸೇವೆ ಆರಂಭಿಸೋ ಮಾತೇ ಇಲ್ಲ ಅಂತಾ ಹೇಳಿದೆ.
ಕರೊನಾ ಮಹಾಮಾರಿ ದೇಶದಲ್ಲಿ ಇನ್ನೂ ತನ್ನ ಅಟ್ಟಹಾಸ ಮುಂದುವರಿಸ್ತಾ ಇದೆ . ಹೀಗಾಗಿ ಇಂತಹ ಸಂದರ್ಭದಲ್ಲಿ ರೆಗ್ಯುಲರ್ ಟ್ರೇನ್ ಸಂಚಾರ ಆರಂಭಿಸೋದು ಸರಿಯಲ್ಲ, ಬೇಡಿಕೆ ಹೆಚ್ಚಾದರೆ ಮಾತ್ರ ಸಾಮಾನ್ಯ ರೈಲು ಸಂಚಾರ ಆರಂಭದ ಬಗ್ಗೆ ಚಿಂತನೆ ನಡೆಸುತ್ತೇವೆ ಅಂತಾ ಐಆರ್ಸಿಟಿಸಿ ಚೇರ್ಮ್ಯಾನ್ ಮಹೇಂದ್ರ ಪ್ರತಾಪ್ ಮಲ್ ಹೇಳಿದ್ರು.
ದೇಶದಲ್ಲಿ ಈಗಾಗಲೇ ಸ್ಪೆಶಲ್ ಟ್ರೇನ್ ಹೆಸರಿನಲ್ಲಿ ಒಟ್ಟು 230 ಎಕ್ಸ್ಪ್ರೆಸ್ ರೈಲುಗಳು 30 ರಾಜಧಾನಿಗಳಲ್ಲಿ ಸಂಚಾರ ನಡೆಸ್ತಾ ಇವೆ,ಅಲ್ಲದೇ ಇನ್ನೂ 100 ವಿಶೇಷ ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆಯೂ ನಡೆದಿದೆ.ಗೃಹ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಹೆಚ್ಚುವರಿ ಸ್ಪೆಶಲ್ ಟ್ರೇನ್ಗಳ ಸಂಚಾರ ಆರಂಭಿಸ್ತೇವೆ ಅಂತಾ ಮಾಹಿತಿ ನೀಡಿದ್ರು.