Mandya: ಚಿತ್ರದುರ್ಗ ಬಸ್ ಅಪಘಾತದಲ್ಲಿ ಮಂಡ್ಯ ಮೂಲದ ಯುವತಿ ಸಜೀವ ದಹನ

Mandya: ಮಂಡ್ಯ: ಚಿತ್ರದುರ್ಗದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತ್ತು. ಪ್ರವಾಸಕ್ಕೆ ಹೋಗುತ್ತಿದ್ದ ಹಲವರು ಆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಾಯಗ“ಂಡಿದ್ದಾರೆ.

ಈ ಅಪಘಾತದಲ್ಲಿ ಮಂಡ್ಯ ಮೂಲದ ಯುವತಿ, ಸಜೀವ ದಹನವಾಗಿದ್ದಾಳೆ. ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ಯುವತಿ ನವ್ಯ ಮೃತ ದುರ್ದೈವಿಯಾಗಿದ್ದಾಳೆ. ಈಕೆಯ ಫ್ಯಾಮಿಲಿ ಸದ್ಯ ಚೆನ್ನರಾಯಪಟ್ಟಣದಲ್ಲಿ ವಾಸವಾಗಿದ್ದು, ನವ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಳು.

ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ನವ್ಯ, ಕ್ರಿಸ್‌ಮಸ್ ರಜೆ ಇದ್ದ ಕಾರಣ, ಬಸ್‌ ಹತ್ತಿ ಪ್ರಯಾಣ ಮಾಡಿದ್ದ ನವ್ಯ. ಆದರೆ ದುರಾದೃಷ್ಟವಶಾತ್ ಆ ಬಸ್ ಅಪಘಾತಕ್ಕೀಡಾಗಿದ್ದು, ನವ್ಯ ಸಜೀವ ದಹನವಾಗಿದ್ದಾಳೆ. ಸದ್ಯ ನವ್ಯ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

About The Author