Web Story: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ, ಎಐ ವೀಡಿಯೋದೇ ಸದ್ದು. ಸತ್ಯ ಸಂಗತಿ ಇದ್ದರೂ ಎಐ ಇರಬಹುದಾ ಅನ್ನೋ ಅನುಮಾನವಂತೂ ಬಂದೇ ಬರತ್ತೆ. ಅದೇ ರೀತಿ ಎಐ ವೀಡಿಯೋ ಕೂಡ ಕೆಲವು ಬಾರಿ ಸತ್ಯ ಅನ್ನೋ ಹಾಗೇ ಇರುತ್ತದೆ.
ಮುಂಚೆ ಎಲ್ಲ ಬೆಕ್ಕು ಸಂಸಾರ ನಡೆಸುವ ರೀತಿ, ಪತಿ ಅಥವಾ ಪತ್ನಿ ಮೋಸ ಮಾಡುವ ರೀತಿ, ಈ ರೀತಿ ಬೇರೆ ಬೇರೆ ಎಐ ವೀಡಿಯೋ ಬರ್ತಿತ್ತು. ಇದೀಗ ಕ್ಯಾಪ್ಸುಲ್ ವೀಡಿಯೋ ಟ್ರೆಂಡ್ ಆಗ್ತಿದೆ. ಕ್ಯಾಪ್ಸುಲ್ ತೆಗೆದು ಬಿಸಿ ನೀರಿಗೆ ಹಾಕಿದ್ರೆ ಸಾಕು, ಅನ್ನ, ಬಿರಿಯಾನಿ, ಇಡ್ಲಿ, ದೋಸೆ ಎಲ್ಲವೂ ಸಿದ್ಧವಾಗಿರತ್ತೆ.
ಅದಕ್ಕಿಂತ ಫನ್ನಿ ಅಂದ್ರೆ, ಅವಿವಾಹಿತರು ಮ್ಯಾರೇಜ್ ಕ್ಯಾಪ್ಸುಲ್ ತೆಗೆದು ಬಿಸಿ ನೀರಿಗೆ ಹಾಕಿದ್ರೆ, ಅದರಿಂದ ಓರ್ವ ವಧು ಎದ್ದು ಬಂದು ಮದುವೆಯಾಗುತ್ತಾಳೆ. ಪೆಟ್ರೋಲ್, ಮದ್ಯ ಹೀಗೆ ಹಲವು ಕ್ಯಾಪ್ಸುಲ್ ವೀಡಿಯೋ ಇದೆ. ಇದೇ ರೀತಿ ಹಲವು ವೀಡಿಯೋಗಳು ವೈರಲ್ ಆಗುತ್ತಿದೆ.




