Political News: ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು.?: ಕುಮಾರಸ್ವಾಮಿಗೆ ಜಮೀರ್ ಪ್ರಶ್ನೆ

Political News: ಬಳ್ಳಾರಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಮೃತನಾಗಿದ್ದ ರಾಜು ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ 25 ಲಕ್ಷ ರೂಪಾಯಿ ಪರಿಹಾರ ಧನ ನೀಡಿದ್ದಾರೆ. ಇದನ್ನು ವಿರೋಧಿಸಿ ಮಾತನಾಡಿದ್ದ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಅದು ಎಲ್ಲಿಂದ ಬಂದ ದುಡ್ಡು ಅಂತಾ ಪ್ರಶ್ನಿಸಿದ್ದಾರೆ.

ಇದಕ್ಕೆ ಮರುಪ್ರಶ್ನೆ ಹಾಕಿರುವ ಜಮೀರ್ ಅಹಮದ್, ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು ಅಂತಾ ಪ್ರಶ್ನಿಸಿದ್ದಾರೆ. ನಿಮಗಂತೂ ಸಹಾಯ ಮಾಡುವ ಮನಸ್ಸಿಲ್ಲ. ಮಾಡುವವರನ್ನು ನೀವು ಪ್ರಶ್ನಿಸಿದರೆ, ಬಡವರು ಎಲ್ಲಿಗೆ ಹೋಗುತ್ತಾರೆ ಎಂದು ಜಮೀರ್ ಪ್ರಶ್ನಿಸಿದ್ದಾರೆ.

ನಾನು ಎಲ್ಲಿಯೂ 25 ಲಕ್ಷ ನೀಡಿದ್ದೇನೆ ಅಂತಾ ಹೇಳಲೇ ಇಲ್ಲ. ಬದಲಾಗಿ ಸಣ್ಣ ಸಹಾಯವೆಂದು ಹೇಳಿದ್ದೇನೆ. ನಾವು ಏನೇ ನೀಡಿದರು, ಸತ್ತವರನ್ನು ವಾಪಸ್ ಕರೆ ತರಲು ಸಾಧ್ಯವಿಲ್ಲ. ಆದರೆ ನಾನು ಮಾಡಿರುವ ಸಣ್ಣ ಸಹಾಯಕ್ಕೆ ನೀವೇಕೆ ಹೊಟ್ಟೆ ಕಿಚ್ಚು ಪಡುತ್ತೀರಿ ಅಂತಾ ಜಮೀರ್ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ಇನ್ನು ಸಾಕ್ಷ್ಯ ನಾಶ ಬಗ್ಗೆ ಮಾತನಾಡಿರುವ ಜಮೀರ್, 1 ಸಲ ಮಾತ್ರ ಮೃತದೇಹದ ಪೋಸ್ಟ್ ಮಾರ್ಟಮ್ ಮಾಡಲಾಗುತ್ತದೆ. ಅಥವಾ ಅವಶ್ಯಕತೆ ಇದ್ದರೆ ಮಾತ್ರ ಮತ್ತೆ ಮಾಡಲಾಗತ್ತೆ. ಪದೇ ಪದೇ ಪೋಸ್ಟ್ ಮಾರ್ಟಮ್ ಯಾರೂ ಮಾಡೋದಿಲ್ಲ. ಇಲ್ಲಿ ಎಲ್ಲಿಯೂ ಸಾಕ್ಷ್ಯ ನಾಶ ಮಾಡಲಾಗಿಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

About The Author