Tumakuru: ತುಮಕೂರು: ತುಮಕೂರಿನಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿದ್ದು, ದೇವರಾಜ ಅರಸು ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ನವರು ರಾಜ್ಯದಲ್ಲಿ ಅತ್ಯಂತ ದೀರ್ಘಕಾಲ ಸಿಎಂ ಆಗಿದ್ದಾರೆ. ಅವರಿಗೆ ಅಭಿನಂದನೆ ತಿಳಿಸಿ ಬಂದೆ. ದೇವರಾಜ ಅರಸು, ಸಿದ್ದರಾಮಯ್ಯ ಇಬ್ಬರು ಕಾಂಗ್ರೇಸ್ ನವರೇ. ದೇವರಾಜ ಅರಸು ಮಾದರಿಯಲ್ಲೇ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿ ದಾಖಲೆ ಮಾಡಿದ್ದಾರೆ. ಇಬ್ಬರಲ್ಲೂ ಇರುವ ಸಾಮ್ಯತೆ ಎಂದರೇ ಬಡತನ ಎಂದರೇನು, ರಾಜ್ಯದ ಅಭಿವೃದ್ಧಿ ಎಂದರೇನು ಎಂಬ ಸ್ಪಷ್ಟ ನಿಲುವು ಹೊಂದಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೇಸ್ ಬಳಸಿಕೊಂಡು ಜನಪರ ಕೆಲಸ ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ.
ಅದರ ಮುಖ್ಯ ಯೋಜನೆ ಹಸಿವು ಮುಕ್ತ ಕರ್ನಾಟಕ ಕಾರ್ಯಕ್ರಮ. ಈ ರೀತಿಯ ಕಾರ್ಯಕ್ರಮಗಳ ಮುಖಾಂತರ ದೀರ್ಘ ಸಿಎಂ ಆಗಿ ಕರ್ತವ್ಯ ಮಾಡಿಕೊಂಡು ಬಂದಿದ್ದಾರೆ ಎಂದು ಜಯಚಂದ್ರ ಹೇಳಿದ್ದಾರೆ.
ಇನ್ನು ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಯಚಂದ್ರ, ಸಿದ್ದರಾಮಯ್ಯರವರೇ ಹೇಳಿದ್ದಾರೆ. ಸಿಎಂ ಸ್ಥಾನದಲಿ ಮುಂದುವರೆಯುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಅಂತ ಎಂದು ಹೇಳಿದ್ದಾರೆ.
ಟಿ.ಬಿ ಜಯಚಂದ್ರಗೆ ಸಚಿವ ಸ್ಥಾನದ ಅಭಿಮಾನಿಗಳ ಒತ್ತಾಯದ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಈ ಫೆಬ್ರವರಿಗೆ ಶಾಸಕನಾಗಿ 48 ವರ್ಷವಾಯಿತು. ನಾನು ಕಾಂಗ್ರೇಸ್ ಪಾರ್ಟಿ ಬಿಟ್ಟು ಅಳ್ಳಾಡಿದವನಲ್ಲ. ಮೇಲೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ವರಿಷ್ಟರಿದ್ದಾರೆ. ನನ್ನ ಹಿನ್ನಲೆ ಅವರಿಗೆ ಗೊತ್ತಿದೆ. ಯಾವ ಸಂದರ್ಭದಲ್ಲಿ ಅವಕಾಶ ಕೊಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಜಯಚಂದ್ರ ಹೇಳಿದ್ದಾರೆ.




