ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳಲ್ಲಿನ ‘ಬಿ-ಖಾತಾ’ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಹಾಗೂ ಫ್ಲಾಟ್‌ಗಳಿಗೆ ‘ಎ-ಖಾತಾ’ ನೀಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ದೊರೆತಿದೆ.
ಅದರಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ರೀತಿಯ 10 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಿದ್ದು, ಅಷ್ಟೂ ಆಸ್ತಿಗಳಿಗೂ ‘ಎ-ಖಾತಾ’ ಪಡೆಯುವ ಸದಾವಕಾಶವನ್ನು ಸರಕಾರ ಕಲ್ಪಿಸಿದಂತಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆನಧಿ ಕೃತವಾಗಿ ಸಾಕಷ್ಟು ಬಡಾವಣೆಗಳನ್ನು ರಚಿಸಿ, ನಿವೇಶನ ಗಳನ್ನು ಹಂಚಿಕೆ ಮಾಡಿ ಮಾರಾಟ ಮಾಡಲಾಗಿದೆ.
ಕಟ್ಟಡ ನಿರ್ಮಾಣಕ್ಕೆ ಇನ್ನೇಲೆ ಅಡ್ಡಿ ಇಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಹಾಗೆಯೇ ಈಗಾಗಲೇ ಪರವಾನಗಿ ಪಡೆಯದೆ ನಿರ್ಮಾಣ ಗೊಂಡಿರುವ ಕಟ್ಟಡಗಳಲ್ಲಿ ಹೆಚ್ಚುವರಿ ನಿರ್ಮಾಣ ಅಥವಾ ಮರು ನಿರ್ಮಾಣ, ನೆಲಸಮಗೊಳಿಸಲು ಅನುಮತಿ ವ ನೀಡಿಲ್ಲ.
ಈ ಸ್ವತ್ತುದಾರರುಗೆ ನೆರವಾಗುವುದು ಹಾಗೂ ಮುಂದೆ ಇಂತಹ ಅನಧಿಕೃತ ಕಟ್ಟಡ, ಸ್ವತ್ತು ಸೃಷ್ಟಿಯಾಗದಂತೆ ತಡೆಯಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಅಧ್ಯಕ್ಷತೆಯಲ್ಲಿ – ರಚನೆಯಾಗಿದ್ದ ಸಮಿತಿಯು ‘ಬಿ- ಖಾತಾ’ ಸ್ವತ್ತುಗಳಿಗೂ 2 ‘ಎ-ಖಾತಾ’ ನೀಡಲು ಕೆಲವು ಶಿಫಾರಸು ಮಾಡಿತ್ತು. ಇನ್ನು ಕಾನೂನು ಸಚಿವ ಜಮೀನುಗಳಲ್ಲಿ ನಕ್ಷೆ ಅನುಮೋದನೆ ಪಡೆಯದೇ ಅನಧಿಕೃತವಾಗಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ನೋಂದಣಿ ಸಹ ಮಾಡಿಕೊಡಲಾಗಿದೆ ಅಂತ H.K.ಪಾಟೀಲ್ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




