Sandalwood: ಸ್ಯಾಂಡಲ್‌ವುಡ್‌ನಲ್ಲಿ ತಾಯಿ ಪಾತ್ರ ಅಂದ್ರೆ ಕೆಲವೇ ಕೆಲವು ನಟಿಯರು ನಮ್ಮ ನೆನಪಿಗೆ ಬರುತ್ತಾರೆ. ಅಂಥವರಲ್ಲಿ ಓರ್ವರು ಅರುಣಾ ಬಾಲ್‌ರಾಜ್. ಇಂದು ಅರುಣಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ.
ನಟ ಗಣೇಶ್, ಸುದೀಪ್, ದರ್ಶನ್, ಯಶ್ ಹೀಗೆ ಹಲವು ಪ್ರಸಿದ್ಧ ನಟರ ಜತೆ ಅರುಣಾ ಅವರು ನಟಿಸಿದ್ದು, ತಾಯಿ-ಅತ್ತೆ ಪಾತ್ರದಲ್ಲಿ ಮಿಂಚಿದ್ದಾರೆ. ಸದಾ ಅಮ್ಮನ ಪಾತ್ರ ಮಾಡುವ ಅರುಣಾ ಅವರಿಗೆ ಲಕ್ಷ್ಮೀ ಅಮ್ಮ ಅಂದ್ರೆ ತುಂಬಾ ಅಚ್ಚು ಮೆಚ್ಚಂತೆ. ಅವರ ಜತೆ 1 ಸಿನಿಮಾದಲ್ಲಿ ಕೂಡ ಅರುಣಾ ಅವರು ನಟಿಸಿದ್ದಾರೆ.
ಇನ್ನು ಇಷ್ಟು ವರ್ಷದಲ್ಲಿ ಸಿನಿಮಾದಲ್ಲಿ ನಟಿಸಿ ನಿಮಗೆ ಸಾಕು ಅಂತಾ ಅನ್ನಿಸಿಲ್ವಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಅರುಣಾ ಅವರು, ಖಂಡಿತಾ ಇಲ್ಲ. ಇನ್ನೂ ನಟಿಸುವ ಆಸೆ ಇದೆ ಎಂದಿದ್ದಾರೆ. ಪ್ರತಿದಿನ ನಾನು ಶೂಟಿಂಗ್ ಹೋಗಲು ನಾನು ರೆಡಿಯಾಗಿದ್ದೇನೆ. ಶೂಟಿಂಗ್ ಇಲ್ಲದ ದಿನ ಸ್ವಲ್ಪ ಬೇಸರವಾಗುತ್ತದೆ ಎಂದು ಹೇಳ್ತಾರೆ ಅರುಣಾ.
ಇನ್ನು ವಿಶೇಷ ಅಂದ್ರೆ ಮಾರ್ಕ್ ಸಿನಿಮಾದಲ್ಲಿ ಅರುಣಾ ನಟಿಸಿದ್ದಾರೆ. ಅಯೋಗ್ಯ 2 ನಲ್ಲೂ ಅರುಣಾ ಅವರು ನಟಿಸಿದ್ದು, ಸತೀಶ್ ಅವರ ತಾಯಿಯ ಪಾತ್ರದಲ್ಲಿ ಅರುಣಾ ಮಿಂಚಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




