Sandalwood: ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯ ಅವರು ನಟಿಸಿದ್ದಾರೆ. ಆದರೆ ಮಗಳು ಮನೆಯಲ್ಲಿ ಮಾತ್ರ, ಶೂಟಿಂಗ್ ವೇಳೆ ಆಕೆ ನಟಿ ಮಾತ್ರ. ಸಿನಿಮಾದಲ್ಲೂ ಆಕೆ ಮಗಳಾಗಿಯೇ ನಟಿಸಿದ್ದಾರೆ. ಆದಷ್ಟು ಡೆಡಿಕೇಟ್ ಮಾಡಿದಾಗ ಮಾತ್ರ ನೀವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರಂತೆ ವಿಜಿ.
ಸಿನಿಮಾದಲ್ಲಿ ಕೋಲಾರ ಭಾಷೆ ಬಳಸಲಾಗಿದೆ. ಎಲ್ಲ ಸಿನಿಮಾದಲ್ಲಿ ಕುಡ್ಲ ಭಾಷೆ ಮಾತನಾಡುವ ರಾಜ್ ಬಿ ಶೆಟ್ಟಿ, ಈ ಸಿನಿಮಾದಲ್ಲಿ ಕೋಲಾರ ಭಾಷೆಯಲ್ಲೇ ಡೈಲಾಗ್ ಹೇಳಿದ್ದಾರೆ. ಹಾಗಾಗಿ ಈ ಸಿನಿಮಾ ನಿಮಗೆಲ್ಲ ಡಿಫ್ರೆಂಟ್ ಆಗಿ ಕಾಣೋದು ಗ್ಯಾರಂಟಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




