Sandalwood: ಈ ಸಲದ ಕನ್ನಡ ಬಿಗ್ಬಾಸ್ ಸೀಸನ್ 12 ಸದ್ದು ಮಾಡ್ತಿರೋದೇ ಗಿಲ್ಲಿಯಿಂದ. ಯಾರಿಗೆ ಕೇಳಿದ್ರೂ ಗಿಲ್ಲಿ ಗೆಲ್ತಾನೆ. ಗಿಲ್ಲಿ ಗೆಲ್ಬೇಕು. ಗಿಲ್ಲಿ ಗೆಲ್ಲಬಹುದು ಅನ್ನೋ ಮಾತೇ ಕೇಳಿ ಬರುತ್ತಿದೆ. ಆ ರೇಂಜಿಗೆ ಗಿಲ್ಲಿ ಸೌಂಡ್ ಮಾಡ್ತಿದ್ದಾನೆ.
ಹಲವು ಸೆಲೆಬ್ರಿಟಿಗಳು ಕೂಡ ಗಿಲ್ಲಿಯೇ ಗೆಲ್ಲಬೇಕು ಅಂತಾ ಹೇಳ್ತಿದ್ದಾರೆ. ಇದೀಗ ಕಿರಿಕ್ ಕೀರ್ತಿ ಕೂಡ ಗಿಲ್ಲಿ ಗೆಲ್ಲಲಿ ಅಂತಾ ಹೇಳ್ತಿದ್ದಾರೆ.
ಯಾವತ್ತೂ ಬಿಗ್ಬಾಸ್ ಮನೆಯಲ್ಲಿ ಇಂತವರೇ ಗೆಲ್ಲಬೇಕು ಅಂತ ಹೇಳಿದವನಲ್ಲ.. ಆದ್ರೆ ಈ ಹುಡುಗ ಮಾಡಿದ ಮೋಡಿಗೆ ಫಿದಾ ಆಗದವರು ಯಾರು..? ಬಿಗ್ಬಾಸ್ ಮನೆಯವರಿಗೆ ಗಿಲ್ಲಿ ಸಖತ್ ಸಿಲ್ಲಿ ಅನಿಸಿದ್ರೂ ಕೂಡ, ಹೊರಗೆ ಕೂತು ಅದೇ ಬಿಗ್ ಬಾಸ್ ನೋಡೋರಿಗೆ ಗಿಲ್ಲಿ ಕೊಟ್ಟ ಮನರಂಜನೆ ಅಷ್ಟಿಷ್ಟಲ್ಲ… ಗಿಲ್ಲಿಯ ಆನ್ ಸ್ಪಾಟ್ ಡೈಲಾಗ್ ಮೆಚ್ಚದವರ್ಯಾರು..? ರಕ್ಷಿತಾ ಶೆಟ್ಟಿ ಕೂಡ ರೇಸಲ್ಲಿ ಇದ್ದಾಳೆ…ಆದ್ರೆ ಗಿಲ್ಲಿ ಗೆಲುವಿನ ಹೆಬ್ಬಾಗಿಲಲ್ಲಿ ಆಲ್ರೆಡಿ ನಿಂತಿದ್ದಾನೆ… ಗೆದ್ದು ಬಾ ಗಿಲ್ಲಿ… ವೋಟ್ ಮಾಡೋದು ಮರೀಬೇಡಿ… ನಮ್ ಹುಡುಗ ಗೆಲ್ಲಬೇಕು ಅಂತಾ ಕಿರಿಕ್ ಕೀರ್ತಿ ಹೇಳಿದ್ದಾರೆ.




