Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್ ಆಚಾರ್ ವಿರುದ್ಧ ನೆಟ್ಟಿಗರ ಬೇಸರ

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕಂಟೆಂಟ್ ಕ್ರಿಯೇಟರ್ ಧನರಾಜ್ ಆಚಾರ ಸಖತ್ ಫೇಮಸ್ ಯೂಟ್ಯೂಬರ್ ಕೂಡ ಹೌದು. ಜನಪ್ರತಿದಿನ ಅವರ ವ್ಲಾಗ್ ನೋಡಲು ಕಾಯುತ್ತಿರುತ್ತಾರೆ. ಯಾಕಂದ್ರೆ ಅವರ ವ್ಲಾಗ್ ಅಷ್ಟು ಮಜಾ ಇರುತ್ತದೆ. ಮಾತಿನಲ್ಲೇ ಜನರನ್ನು ನಗಿಸುವ ಟ್ಯಾಲೆಂಟ್ ಇರುವ ಧನರಾಜ್ ವಿರುದ್ಧ ಈಗ ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣವೇನೆಂದರೆ, ಧನರಾಜ್ ಈ ವರ್ಷ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದಾರೆ. ಮಾಲೆ ಧರಿಸಿದ ಬಳಿಕ ಧನರಾಜ್ ವ್ಲಾಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಆದರೆ ವ್ಲಾಗ್‌ನಲ್ಲಿ ಉಳಿದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಜತೆ ತಮಾಷೆ ಮಾಡಿದ ವೀಡಿಯೋವನ್ನೂ ಹಾಕಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಧನರಾಜ್ ಮಾಲೆ ಧರಿಸಿದ ಬಳಿಕ ಮಾಲಾಧಾರಿಗಳ ಜತೆ ಶಬರಿಮಲೆಗೆ ತೆರಳಿದ್ದು, ಮಾರ್ಗಮಧ್ಯೆ, ಬೇರೆ ಮಾಲಾಧಾರಿ ಧರಿಸಿದ್ದ ಘಂಟೆ ಬಗ್ಗೆ ಧನರಾಜ್ ತಮಾಷೆ ಮಾಡಿದ್ದಾರೆ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಜನ, ಮಾಲೆ ಹಾಕಿದ ಮೇಲೆ ಇದೆಲ್ಲ ಬೇಡವಾಗಿತ್ತು. ಲೈಕ್ಸ್ ಕಾಮೆಂಟ್ಸ್ ಸಲುವಾಗಿ ನೀವು ಏನೆಲ್ಲ ಮಾಡುತ್ತೀರಿ..? ಮಾಲೆ ಹಾಕಿ ಶೋಕಿ ಮಾಡೋದ್ಯಾಕೆ ಅಂತೆಲ್ಲ ಪ್ರಶ್ನಿಸಿದ್ದಾರೆ.

ಅಲ್ಲದೇ, ನಾವೂ ಶಬರಿಮಲೆಗೆ ಹೋಗ್ತೀವಿ ಅಂತಾ ಹೇಳುವ ಮಹಿಳೆಯರಿಗೂ ನಿಮಗೂ ಯಾವುದೇ ವ್ಯತ್ಯಾಸವಿಲ್ಲ ಅಂತಾ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author