ನಾವು ಚೆಂದಗಾಣಿಸಬೇಕು ಅಂದ್ರೆ, ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಏಕೆಂದರೆ ನಮ್ಮ ದೇಹದಲ್ಲಿ ರಕ್ತ ಸಂಚಲನೆ ಮತ್ತು ರಕ್ತದ ಗುಣ ಉತ್ತಮವಾಗಿದ್ದಲ್ಲಿ ಮಾತ್ರ, ನಮ್ಮ ಕೂದಲು, ಚರ್ಮ ಚೆನ್ನಾಗಿರುತ್ತದೆ. ಅಲ್ಲದೇ ನಮ್ಮ ರಕ್ತವನ್ನು ಸ್ಕಿನ್‌ಗೆ ಸಂಬಂಧಿಸಿದ ಕೆಲವು ಚಿಕಿತ್ಸೆಯಲ್ಲಿ ಬಳಸುತ್ತಾರಂತೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಚರ್ಮರೋಗ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಈ ಚಿಕಿತ್ಸೆಯನ್ನು ಪಿಆರ್‌ಪಿ ಚಿಕಿತ್ಸೆ ಎನನಲಾಗುತ್ತದೆ. ಪಿಆರ್‌ಪಿ ಎಂದರೆ, ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ. ನಮ್ಮ ಕೂದಲು ಮತ್ತು ಚರ್ಮಕ್ಕೆ ಪುನರುಜ್ಜೀವನ ನೀಡಲು, ನಮ್ಮದೇ ರಕ್ತವನ್ನು ಇಲ್ಲಿ ಬಳಸಲಾಗುತ್ತದೆ. ಇಂಜೆಕ್ಷನ್ ಮೂಲಕ ನಮ್ಮ ರಕ್ತವನ್ನೇ ನಮ್ಮ ಚರ್ಮಕ್ಕೆ ನೀಡಲಾಗುತ್ತದೆ.
ಆಗ ನಮ್ಮ ಸ್ಕಿನ್‌ನಲ್ಲಿರುವ ಹಳೆ ಅಂಶಗಳು ಹೋಗಿ, ಈ ಪ್ಲೇಟ್‌ಲೆಟ್ಸ್ ಕೆಲಸ ಮಾಡಲು ಶುರು ಮಾಡುತ್ತದೆ. ಆಗ ನಮ್ಮ ತ್ವಚೆ, ಕೂದಲು ಸುಂದರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




