Mandya: ಆಸ್ತಿಗಾಗಿ ಸ್ವಂತ ತಮ್ಮನನ್ನೇ ಹ*ಗೈದ ಅಣ್ಣ, ಉದ್ರಿಕ್ತ ಗ್ರಾಮಸ್ಥರಿಂದ ಅಣ್ಣನ ಮನೆ ಧ್ವಂಸ

Mandya News: ಮಂಡ್ಯ: ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣ ಹಾಗೂ ಆತನ ಮಕ್ಕಳು ಸೇರಿ ತಮ್ಮನ ಹತ್ಯೆ ಮಾಡಿದ್ದಾರೆ.

35 ವರ್ಷದ ಯೋಗೇಶ್ ಮೃತ ವ್ಯಕ್ತಿಯಾಗಿದ್ದಾನೆ. ಮೃತ ಯೋಗೇಶನ ಅಣ್ಣ ಲಿಂಗರಾಜ, ಮಕ್ಕಳಾದ ಭರತ್, ದರ್ಶನ್ ರಿಂದ ಹತ್ಯೆಯಾಗಿದೆ. ಇದೇ ತಿಂಗಳ 21ರಂದು ಮೃತ ಯೋಗೇಶ್ ಮದುವೆ ಫಿಕ್ಸ್ ಆಗಿತ್ತು. ಆದರೆ ಸಹೋದರರ ಜತೆ ಯೋಗಿಶ್ ಜಗಳವಾಗಿದ್ದು, ಜಗಳ ತಾರಕಕ್ಕೇರಿ ಹರಿತವಾದ ಆಯುಧದಿಂದ ಯೋಗೇಶ್‌ನನ್ನು ದುರುಳರು ಹತ್ಯೆ ಮಾಡಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನು ಹತ್ಯೆ ನಡೆದ ಬಳಿಕ, ಉದ್ರಿಕ್ತ ಗ್ರಾಮಸ್ಥರು ಅಣ್ಣನಾದ ನಿಂಗರಾಜು ಮನೆ ಧ್ವಂಸ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನು ನಾಶ ಮಾಡಿದ್ದಾರೆ. ಟಿವಿ, ಫ್ರಿಡ್ಜ್ ಸೇರಿದಂತೆ ವಿವಿಧ ಪೀಠೋಪಕರಣ ಪುಡಿಪುಡಿಯಾಗಿದೆ. ಬಳಿಕ ಸ್ಥಳಕ್ಕೆ ಬಂದ ಪೋಲೀಸರು ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸಿದ್ದಾರೆ.

About The Author