Beauty Tips: ಇಂದಿನ ಕಾಲದ ಹಲವು ಜನರಿಗೆ ಸೌಂದರ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಎಷ್ಟೋ ಜನರಿಗೆ ಈ ಬಗ್ಗೆ ಯೋಚನೆ ಮಾಡಿ ಮಾಡಿಯೇ ಕೂದಲು ಇನ್ನೂ ಹೆಚ್ಚು ಉದುರೋಕ್ಕೆ ಶುರುವಾಗುತ್ತದೆ. ಹಾಗಾಗಿ ಇದಕ್ಕೆ ಕಾರಣ ಮತ್ತು ಪರಿಹಾರ ಎರಡರ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ.
ಚರ್ಮ ತಜ್ಞೆಯಾಗಿರುವ ಡಾ.ವಿದ್ಯಾ ಅವರು ಈ ಬಗ್ಗೆ ವಿವರಿಸಿದ್ದು, ನಾರ್ಮಲ್ ಆಗಿ ಎಲ್ಲರಿಗೂ ಕೂದಲು ಉದುರುತ್ತದೆ. ಆದರೆ ನಿಮಗೆ ವಯಸ್ಸಿಗೂ ಮೀರಿ ಅತೀಯಾದ ಕೂದಲು ಉದುರುತ್ತಿದೆ ಅಂದ್ರೆ, ಅದರ ಹಿಂದೆ ಬೇರೆ ಏನೋ ಕಾರಣವಿರಬಹುದು.
ಕೆಲವರಿಗೆ ಜ್ವರ ಬಂದಾಗ ಹೆಚ್ಚು ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಪಿಸಿಓಡಿ, ಪಿಸಿಓಎಸ್ ಸಮಸ್ಯೆ ಇದ್ದಾಗ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ದೇಹದಲ್ಲಿ ಹಾರ್ಮೋನಲ್ಲಿ ಏರುಪೇರಾದಾಗ ಕೂದಲು ಉದುರುತ್ತದೆ. ಬಾಣಂತನವಾದ 3 ತಿಂಗಳಾದ ಮೇಲೆ ಕೂದಲು ಹೆಚ್ಚು ಉದುರಲು ಶುರುವಾಗುತ್ತದೆ. ಹೀಗೆ ಯಾವುದಾದರೂ ಕಾರಣಕ್ಕೆ ಮಾತ್ರ ಕೂದಲು ಉದುರುತ್ತದೆ ಅಂತಾರೆ ವೈದ್ಯರು.
ಇದ್ಯಾವುದೂ ಇಲ್ಲದೇ ನಿಮಗೆ ಹೆಚ್ಚು ಕೂದಲು ಉದುರುತ್ತಿದೆ ಎಂದರೆ ನೀವು, ಸ್ಟ್ರೈಟ್ನರ್, ಹೇರ್ ಡ್ರೈಯರ್ ಸೇರಿ ಹಲವು ವಸ್ತುಗಳನ್ನು ನೀವು ಬಳಸುವುದನ್ನು ಬಿಡಬೇಕು. ಶಾಂಪೂ, ಎಣ್ಣೆ ಕೂಡ ಯಾವುದು 1 ಉತ್ತಮ ಕ್ವಾಲಿಟಿಯದ್ದೇ ಬಳಸಬೇಕು. ಪದೇ ಪದೇ ಚೇಂಜ್ ಮಾಡಬಾರದು. ಇನ್ನು ಆರೋಗ್ಯಕರ ಆಹಾರ ಸೇವನೆ, ಹಣ್ಣು-ತರಕಾರಿ ಸೇವನೆ, ಹೆಚ್ಚು ನೀರಿನ ಸೇವನೆ ಮಾಡಬೇಕು. ಬೇಕ್ ಮಾಡಿದ ಪದಾರ್ಥ, ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಇದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




