Political News: ಬೆಂಗಳೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಾನು ರಾಜ್ಯ ಪ್ರವಾಸ ಮಾಡಿದ ಸಂದರ್ಭದಲ್ಲಿ ಜನ, ಕುಮಾರಣ್ಣ ಮರಳಿ ರಾಜ್ಯ ರಾಜಕಾರಣಕ್ಕೆ ಬರಲಿ ಎಂದು ಮಾತನಾಡಿದ್ದಾರೆ. ಹಾಗಾಗಿ ಇದು ರಾಜ್ಯದ ಜನರ ಆಸೆಯಾಗಿದೆ. ಕಾಂಗ್ರೆಸ್ ಆಡಳಿತದ ವೈಖರಿ ನೋಡಿ ಜನ ಬೇಸತ್ತು ಹೋಗಿದ್ದಾರೆ. ಕುಮಾರಣ್ಣನವರ ರಾಜ್ಯದ ಆಡಳಿತವನ್ನು ನೆನೆಸಿಕ“ಳ್ಳುತ್ತಿದ್ದಾರೆ. ಹಾಗಾಗಿ ಕುಮಾರಣ್ಣ ಮರಳಿ ರಾಜ್ಯಕ್ಕೆ ಬರಲಿ ಅನ್ನೋದು ಜನರ ಅಭಿಪ್ರಾಯ ಮತ್ತು ನಮ್ಮ ಮಿತ್ರಕೂಟದಲ್ಲಿ ಕೆಲವರ ಅಭಿಪ್ರಾಯವಾಗಿದೆ ಎಂದು ನಿಖಿಲ್ ಹೇಳಿದ್ದಾರೆ.
ಕುಮಾರಣ್ಣನವರಿಗೆ ಪ್ರಧಾನಿಗಳು 2 ಪ್ರಮುಖ ಹುದ್ದೆಗಳನ್ನು ನೀಡಿದ್ದಾರೆ. ಹಾಗಾಗಿ ದೇಶವನ್ನು ಕಟ್ಟುವ ಸಲುವಾಗಿ ಕುಮಾರಣ್ಣ ಅವರು ಹೆಚ್ಚು ಸಮಯವನ್ನು ಮೀಸಲಿರಿಸಿದ್ದಾರೆ. ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ಅವರು ಯಾವ ಹಂತದಲ್ಲಿ ಬರಬೇಕು ಎಂದು ದೇವೇಗೌಡರು, ಸೇರಿ ಎಲ್ಲ ಹಿರಿಯ ನಾಯಕರು ಸೂಕ್ತ ಸಂದರ್ಭದಲ್ಲಿ ನಿರ್ಣಯ ಕೈಗ“ಳ್ಳುತ್ತಾರೆಂದು ನಿಖಿಲ್ ಹೇಳಿದ್ದಾರೆ.
ಇನ್ನು ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿರುವ ನಿಖಿಲ್, ಜೆಡಿಎಸ್ನ ಕಾರ್ಯಕರ್ತರಿಗೆ ಎನ್ಡಿಎ ವಿರುದ್ಧವಾಗಿ ಹೇಳಿಕೆ ನೀಡಬಾರದು ಎಂದು ನಾವು ನಿರ್ದೇಶಿಸಿದ್ದೇವೆ. ವಿಶೇಷವಾಗಿ ದೇವೇಗೌಡರು, ಕುಮಾರಣ್ಣ ಹೇಳಿದ್ದಾರೆ, ನಿಮ್ಮ ನಿಲುವುಗಳನ್ನು ನಮ್ಮ ಬಳಿ ಹೇಳಬೇಕೇ ವಿನಃ ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೆ ನೀಡಬಾರದು ಎಂದಿದ್ದಾರೆ. ಅದೇ ರೀತಿ ಬಿಜೆಪಿ ನಾಯಕರು ಕೂಡ ಕಾರ್ಯಕರ್ತರಿಗೆ ನೀಡಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ನಿಖಿಲ್ ಹೇಳಿದ್ದಾರೆ.




