Bigg Boss Kannada: ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧೆಯಲ್ಲಿ ಗಿಲ್ಲಿ ವಿನ್ನರ್ ಆಗಿದ್ದು, ರಕ್ಷಿತಾ ರನ್ನರ್ ಆಗಿದ್ದಾರೆ. ಗಿಲ್ಲಿ ವಿನ್ನರ್ ಅಂತಾ ಘೋಷಣೆಯಾಗುವುದಕ್ಕೂ ಮುನ್ನವೇ, ಅವರೇ ಗೆಲ್ಲುತ್ತಾರೆ ಅಂತಾ ಹಲವರು ಹೇಳಿದ್ದರು. ಅದೇ ರೀತಿ ಗಿಲ್ಲಿ ವಿನ್ ಕೂಡ ಆಗಿದ್ದಾರೆ.
ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮೂರ ಹುಡುಗ ಗಿಲ್ಲಿ ನಟನಿಗೆ ಬಿಗ್‌ಬಾಸ್ ವಿನ್ ಆಗಿದ್ದಕ್ಕೆ ವಿಶ್ ಮಾಡಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು. ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ. ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ವಿಶ್ ಮಾಡಿದ್ದಾರೆ.
ಸದ್ಯ ಗಿಲ್ಲಿಗೆ 50 ಲಕ್ಷ ಕ್ಯಾಶ್ ಪ್ರೈಸ್ ಬಂದಿದ್ದಲ್ಲದೇ, ಮತ್ತೆ 10 ಲಕ್ಷ ಕಿಚ್ಚ ಸುದೀಪ್ ವೈಯಕ್ತಿಕವಾಗಿ ನೀಡಲಿದ್ದಾರೆ. ಅಲ್ಲದೇ ಜೆಡಿಎಸ್ ಎಂಎಲ್‌ಸಿ ಶರವಣ್ ಕೂಡ ಬಿಗ್‌ಬಾಸ್ ವಿನ್ನರ್‌ಗೆ 20 ಲಕ್ಷ ನೀಡುತ್ತೇನೆ ಎಂದಿದ್ದರು. ಆ ಹಣ ಕೂಡ ಬರಬಹುದು. ಗಿಲ್ಲಿ ತನಗೆ ಬರುವ ಹಣದಲ್ಲಿ ಜಮೀನು ಖರೀದಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ರಕ್ಷಿತಾ ಶೆಟ್ಟಿಗೂ ಕೂಡ 30 ಲಕ್ಷದ ತನಕ ಹಣ ಬರುವ ಸಾಧ್ಯತೆ ಇದ್ದು, ನಾನು 20 ದನ ಖರೀದಿ ಮಾಡುತ್ತೇನೆ ಎಂದು ರಕ್ಷಿತಾ ಹೇಳಿದ್ದಾರೆ. ಡೈರಿ ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದಾರೆ ರಕ್ಷಿತಾ. ಉಳಿದ ಹಣವನ್ನು ತನಗಾಗಿ ಖರ್ಚು ಮಾಡ್ತಾರಂತೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ… pic.twitter.com/qBOoOrxCPd— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) January 18, 2026




