Recipe: ಪಾಲಕ್ ಪಾವ್‌ಭಾಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪಾಲಕ್, ಬೇಯಿಸಿದ 2 ರಿಂದ 3 ಆಲೂಗಡ್ಡೆ, ಬಟಾಣಿ, 5ರಿಂದ 7 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 3ರಿಂದ 4 ಹಸಿಮೆಣಸು, 1 ಈರುಳ್ಳಿ, 4 ಸ್ಪೂನ್ ಎಣ್ಣೆ, ಗರಂ ಮಸಾಲೆ, ಪಾವ್‌ ಭಾಜಿ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಬೆಣ್ಣೆ, ಉಪ್ಪು.

ಮಾಡುವ ವಿಧಾನ: ಪಾಲಕ್‌ನ್ನು ಚೆನ್ನಾಗಿ ವಾಶ್ ಮಾಡಿ ಕ್ಲೀನ್ ಮಾಡಿ. ಬಳಿಕ ನೀರು ಬಿಸಿ ಮಾಡಿ, ಕುದಿ ಬಂದ ಬಳಿಕ, ಅದರಲ್ಲಿ ಪಾಲಕ್ ಹಾಕಿ ಮತ್ತೆ 1 ನಿಮಿಷ ಕುದಿಸಿ. ನಂತರ, ಇದೇ ಪಾಲಕ್ ತೆಗೆದು ತಣ್ಣೀರಿನಲ್ಲಿ ಹಾಕಿ. ಸ್ಮ್ಯಾಶ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ತಯಾರಿಸಿ.

ನಂತರ ಹಸಿಮೆಣಸು, ಜಿಂಜರ್, ಬೆಳ್ಳುಳ್ಳಿ ಎಲ್ಲವನ್ನೂ ಹಾಕಿ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಪುಡಿ ಮಾಡಿದ ಮಿಶ್ರಣ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಇದಕ್ಕೆ ಬೇಯಿಸಿದ ಆಲೂ, ಬಟಾಣಿ ಹಾಕಿ ಮಿಕ್ಸ್ ಮಾಡಿ. ಬಳಿಕ ಪಾಲಕ್ ಪೇಸ್ಟ್ ಮತ್ತು ನೀರು ಹಾಕಿ ಮಿಕ್ಸ್ ಮಾಡಿ.

ನಂತರ ಬೇಕಾದಷ್ಟು ಉಪ್ಪು, ಗರಂ ಮಸಾಲೆ, ಕಸೂರಿ ಮೇಥಿ, ಧನಿಯಾ ಪುಡಿ, ಪಾವ್ ಭಾಜಿ ಮಸಾಲೆ ಇತ್ಯಾದಿ ಹಾಕಿ ಮಿಕ್ಸ್ ಮಾಡಿ. 1 ಕುದಿ ಬಂದ ಬಳಿಕ, ಬೆಣ್ಣೆ ಹಾಕಿ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ.

ಈಗ 1 ಸಣ್ಣ ಪ್ಯಾನ್‌ಗೆ ಎಣ್ಣೆ, ಬೆಳ್ಳುಳ್ಳಿ, ಅರ್ಧ ಸ್ಪೂನ್ ಖಾರದ ಪುಡಿ ಹಾಕಿ, ಗ್ರೇವಿಗೆ ಹಾಕಿ ಮಿಕ್ಸ್ ಮಾಡಿದ್ರೆ, ಪಾಲಕ್ ಪಾವ್ ಭಾಜಿ ರೆಡಿ. ಪ್ಲೇಟ್ ಗೆ ಈ ಗ್ರೇವಿ, ಪಾವ್, ಈರುಳ್ಳಿ, ನಿಂಬೆಹಣ್ಣು ಹಾಕಿ ಸರ್ವ್ ಮಾಡಿ.

About The Author