Mandya News: ಮಂಡ್ಯದಲ್ಲಿಂದು ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಎನ್.ಚಲುವರಾಯಸ್ವಾಮಿ, ಬಿಜೆಪಿಯವರು ಎರಡನೇ ಬ್ರಿಟಿಷರು ಎಂದು ವಾಗ್ದಾಳಿ ನಡೆಸಿದ್ದಾರೆ.
ಯುವ ಸಮ್ಮೇಳನದಲ್ಲಿ ಮಾತನಾಡಿದ ಅವರು ಹಳ್ಳಿ ಹಳ್ಳಿಯಲ್ಲಿ ನರೇಗಾ ಬಚಾವೋ ಬಾವುಟ ಹಿಡಿದು ಹೋರಾಟ ಮಾಡಿ. ಜೆಡಿಎಸ್ ಅನ್ನು ಓಡಿಸದಿದ್ದರೆ ಜಿಲ್ಲೆಗೆ ಭವಿಷ್ಯ ಇಲ್ಲ. ಮೋದಿ ಅವರ ಪ್ರಧಾನ ಮಂತ್ರಿ ಸಾಧನೆ ಅಂದ್ರೆ 8 ಸಾವಿರ ಕೋಟಿ ವಿಮಾನದಲ್ಲಿ ಸುತ್ತಾಡುತ್ತಿದ್ದಾರೆ. ಯಾರು ಸಹ ಈ ರೀತಿ ವಿಮಾನ ಖರೀದಿ ಮಾಡಿಲ್ಲ. ಮನಮೋಹನ್ ಸಿಂಗ್ ಇದ್ದಾಗ 56 ಲಕ್ಷ ಕೋಟಿ ಸಾಲ ಇತ್ತು. 11 ವರ್ಷದಲ್ಲಿ ನರೇಂದ್ರ ಮೋದಿ 3 ಲಕ್ಷ ಕೋಟಿಗೂಕ್ಕೆ ಹೆಚ್ಚು ಸಾಲದ ಹೆಜ್ಜೆ ಇಟ್ಟಿದ್ದಾರೆ. ಇದೇ ಇವರ ಸಾಧನೆ ಆಗಿದೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಬಿಜೆಪಿ ಬಗ್ಗೆ ಮಾತನಾಡಲು ಬೇಜಾರಾಗುತ್ತೆ. 5 ವರ್ಷ ಯಾವ ಅಭಿವೃದ್ಧಿ ಮಾಡಿಲ್ಲ ಕೆಟ್ಟ ಪರಿಸ್ಥಿತಿ ಮಾಡಿದ್ರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಆಗ್ತಿದೆ. ಗ್ಯಾರಂಟಿ ಯೋಜನೆ ಮೂಲಕ ಜನರಿಗೆ ಸಹಾಯವಾಗ್ತಿದೆ. ನಮ್ಮ ಯೋಜನೆಯನ್ನ ಬೇರೆ ರಾಜ್ಯದವರು ಮಾಡಿದ್ರು ನಡೆಸಲಾಗಲಿಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಕೆಲಸ ಮಾಡ್ತಿದೆ. ಜಿಲ್ಲೆಯ 7 ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗ್ತಿದೆ. ಸದ್ಯದಲ್ಲೇ ಅಂಕಿಅಂಶಗಳ ಬಿಡುಗಡೆ ಮಾಡ್ತೇವೆ. ಕುಮಾರಸ್ವಾಮಿ ತರ 8 ಸಾವಿರ ಕೋಟಿ ಹೇಳಲ್ಲ ನಾವು ಹುಡುಕುತ್ತಿದ್ದೇವೆ ಎಂದು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
10ಸಾವಿರ ಕೋಟಿಯನ್ನು ಜಿಲ್ಲೆಗೆ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಇದನ್ನ ಸುಳ್ಳು ಅಂತ ಹೇಳಿದ್ರೆ ಯಾರು ಎಲ್ಲೆ ಕರೆದರು ಬಂದು ನಾವು ನೇರವಾಗಿ ಮಾತನಾಡುತ್ತೇವೆ. ಮದ್ದೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗ್ತಿದೆ. ಕೆ.ಆರ್.ಪೇಟೆಗೂ 150 ಕೋಟಿಯನ್ನ ನೀರಾವರಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಮೋದಿ ಅವರು ಮಹಾತ್ಮ ಗಾಂಧಿಯವರ ಹೆಸರು ತೆಗೆದು ದೊಡ್ಡ ಸಾಧನೆ. ಕೇಂದ್ರ ಸರ್ಕಾರ ಅನೇಕ ಬದಲಾವಣೆ ತಂದಿದ್ದಾರೆ. ಒಂದು ರಾಜ್ಯಕ್ಕೂ ಪತ್ರ ಬರೆಯದೆ, ಸಿಎಂಗಳ ಜೊತೆ ಚರ್ಚಿಸದೆ ನೇರ ನಿರ್ಧಾರ ತೆಗೆದುಕೊಂಡಿದ್ದಾರೆ. ಜೆಡಿಎಸ್ ಸಂಸದರು ಮನ್ ರೇಗಾ ಬದಲಾವಣೆ ಆದಾಗ ಅವರೇ ಬಯ್ಯುತ್ತಿದ್ದರು. ಇವಾಗ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ನಾವೇ ಇದನ್ನ ರಕ್ಷಣೆ ಮಾಡಿಕೊಳ್ಳಬೇಕು ಎಂದು ಚಲುವರಾಯಸ್ವಾಮಿ ಯುವಕರಿಗೆ ಕರೆ ಕೊಟ್ಟಿದ್ದಾರೆ.
ನರೇಗಾ ಬಡವರ ಬದುಕು ಕಟ್ಟಿಕೊಟ್ಟಿತ್ತು. ದೊಡ್ಡ ಅನ್ಯಾಯವನ್ನು ಕೇಂದ್ರ ಸರ್ಕಾರ ಮಾಡಿದೆ. ಹಳ್ಳಿ ಹಳ್ಳಿಯಲ್ಲಿ ನರೇಗಾ ಬಚಾವೋ ಬಾವುಟ ಹಿಡಿದು ನಿಲ್ಲಿ ಹೋರಾಟ ಮಾಡಿ. ಬಿಜೆಪಿಯವರು ಎರಡನೇ ಬ್ರಿಟಿಷರು. ಬ್ರಿಟಿಷರ ನೀತಿ ಅನುಸರಿಸುತ್ತಿದ್ದಾರೆ. ಯುವಕರು ಮುಂದೆ ಬರಬೇಕು. ಪಕ್ಷಕ್ಕೆ ದುಡಿದು ಪಕ್ಷ ಸಂಘಟಿಸಿ ಗುರ್ತಿಸಿಕೊಳ್ಳಿ. ಸ್ಥಳೀಯ ಮಟ್ಟದಲ್ಲಿ ನಿಮಗೆ ಅವಕಾಶ ಕೊಡ್ತೇನೆ.
ಕಷ್ಟ ಪಟ್ಟು ಮುಂದೆ ಬನ್ನಿ ಯುವಕರಿಗೆ ಯಶಸ್ಸು ಸಿಗುತ್ತೆ. ಜೆಡಿಎಸ್ ಅನ್ನು ಹೊಡಿಸದಿದ್ದರೆ ಜಿಲ್ಲೆಗೆ ಭವಿಷ್ಯ ಇಲ್ಲ. ನನಗೋಸ್ಕರ ಹೋಡಿಸಬೇಡಿ ಅಂಕಿಅಂಶಗಳ ತೆಗೆದುಕೊಳ್ಳಿ. ನಮ್ಮ ಅವಧಿ ಮುಗಿತು ನಿಮ್ಮ ಜೊತೆ ನಾವು ಇರ್ತೇವೆ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.




