Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಕಾಳು, ಅರ್ಧ ಕಪ್ ಅಕ್ಕಿ, ಸ್ವಲ್ಪ ಪಾಲಕ್, ಕೊತ್ತೊಂಬರಿ ಸೊಪ್ಪು, ಶುಂಠಿ, 1 ಸ್ಪೂನ್ ಜೀರಿಗೆ, 2ರಿಂದ 3 ಹಸಿಮೆಣಸಿನಕಾಾಯಿ, ಉಪ್ಪು, ನಿಂಬೆರಸ, ಎಣ್ಣೆ.
ಮಾಡುವ ವಿಧಾನ: ಅಕ್ಕಿ ಮತ್ತು ಹೆಸರು ಕಾಳನ್ನು ಸ್ವಚ್ಛ ಮಾಡಿ, ನೀರು ಹಾಕಿ 4ರಿಂದ 5 ಗಂಟೆ ನೆನೆಸಿಡಿ. ನಂತರ ಮಿಕ್ಸಿ ಜಾರ್‌ಗೆ ಹಾಕಿ, ಸ್ವಚ್ಛ ಮಾಡಿದ ಪಾಲಕ್, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಜೀರಿಗೆ, ಹಾಕಿ ದೋಸೆ ಹಿಟ್ಟು ತಯಾರಿಸಿ. ಇದಕ್ಕೆ ಉಪ್ಪು, ನಿಂಬೆರಸ ಸೇರಿಸಿ. ಕಾವಲಿ ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಹಾಕಿದರೆ, ಪಾಾಲಕ್ ಪೆಸರಟ್ಟು ರೆಡಿ.




