National News: ಭರತನಾಟ್ಯ ಅನ್ನೋದು ಬರೀ 1 ಕಲೆಯಲ್ಲ. ಅದು ವಿದೇಶದಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸುವ ಕಲೆ. ಕೆಲವರ ಜೀವನ ರೂಪಿಸುವ ಕಲೆ. ಅನ್ನಪೂರ್ಣೆಗೆ ಸಮನಾದ ಕಲೆ. ಅದಕ್ಕೆ ಅದರದ್ದೇ ಆದ ಬೆಲೆ ಇದೆ. ಆದರೆ ಇಲ್ಲೋರ್ವ ಭರತನಾಟ್ಯ ಕಲಾವಿದೆ.
ಕಲೆಗೆ ಇರುವ ಬೆಲೆ ಮತ್ತು ಕಲಾವಿದರಿಗೆ ಇರುವ ಬೆಲೆ ಮರೆತು. ಶೂ ಪ್ರಮೋಟ್ ಮಾಡಲು, ಶೂಸ್ ಧರಿಸಿ, ಭರತನಾಟ್ಯ ಮಾಡಿದ್ದಾಳೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯಕ್ಕೆ ಅವಮಾನಿಸಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಇವಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ವೀಡಿ.ೋವನ್ನು ಶೇರ್ ಮಾಡಿರುವ ಯುವತಿ, ಭರತನಾಟ್ಯ ಮಾಡುವ ವೇಳೆ ಧರಿಸುವ ಗೆಜ್ಜೆಯ ಬಗ್ಗೆ ಮಾತನಾಡಿದ್ದಾರೆ. ಗೆಜ್ಜೆಗೆ ತನ್ನದೇ ಆದ ಮಹತ್ವವಿದೆ. ಅದನ್ನು ಪೂಜೆ ಮಾಡಿ ಧರಿಸಲಾಗುತ್ತದೆ. ಅದನ್ನು ನಟರಾಜನ ರೂಪದಲ್ಲಿ ನಾವು ಪೂಜಿಸುತ್ತೇವೆ. ಅದನ್ನು ಧರಿಸಿ, ಭರತನಾಟ್ಯದ ದಿರಿಸು ಧರಿಸಿ, ಆಕೆಯ ಬಳಿ ನೀವು ಹೇಗೆ ಶೂ ಪ್ರಮೋಟ್ ಮಾಡಿಸಿದ್ದೀರಿ..? ಇದರಿಂದ ನೀವು ಜನರಿಗೆ ಏನು ಸಂದೇಶ ಸಾರಲು ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾಳೆ.
ಆಕೆ ಭರತನಾಟ್ಯ ಕಲಿತಿದ್ದರೂ, ಅದು ಹೇಗೆ ಶೂಸ್ ಹಾಕಿ ಈ ರೀತಿ ಮಾಡಲು ನಿರ್ಧರಿಸಿದ್ದಳು..? ಈ ರೀತಿ ಮಾಡುವಾಗ ಆಕೆಯ ಪೋಷಕರು, ಗುರುಗಳು ಆಕೆಯನ್ನು ತಡೆಯಲಿಲ್ಲವೇ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ ನಾವು ಬರೀ ಭರತನಾಟ್ಯಕ್ಕಲ್ಲ, ಬದಲಾಗಿ ಎಲ್ಲ ವಿದ್ಯೆಗೂ ಗೌರವಿಸಬೇಕು ಎಂದಿದ್ದಾಳೆ. ಈಕೆಯ ಈ ಪೋಸ್ಟ್‌ಗೆ ನಕಾರಾತ್ಮಕ ಮತ್ತು ಸಕಾರಾತ್ಮಕ ಕಾಮೆಂಟ್‌ಗಳು ಬಂದಿದೆ.



