Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬಿಗ್‌ಬಾಸ್‌ಗೆ ಹೋದ್ಮೇಲೆ ನನಗೆ ಮಾತನಾಡುವ ಧೈರ್ಯ ಬಂದಿದೆ. ಜನ ಗುರುತಿಸಿ ಮಾತನಾಡುವಂತಾಗಿದೆ ಎಂದು ಸಂತಸ ಹಂಚಿಕ“ಂಡಿದ್ದಾರೆ.
ಮಾತು ಮುಂದುವರಿಸಿದ ಮಲ್ಲಮ್ಮ, ನಾನು ಬಿಗ್‌ಬಾಸ್‌ನಲ್ಲಿ ಯಾರ ಜತೆಗೂ ಜಗಳವಾಡಿಲ್ಲ. ನನಗೆ ಅಲ್ಲಿ ರಕ್ಷಿತಾ, ಗಿಲ್ಲಿ, ಧ್ರುವಂತ ಇಷ್ಟಾ ಆಗಿದ್ರು ಎಂದು ಹೇಳಿದ್ದಾರೆ.
ಇನ್ನು ತಮ್ಮೂರು ಬಿಟ್ಟು ಬೆಂಗಳೂರು ಬರಲು ಕಾರಣವೇನು ಎಂದು ಕೇಳಿದಾಗ ಉತ್ತರಿಸಿದ ಮಲ್ಲಮ್ಮ, ಮಗನ ಮದುವೆ ಮಾಡಿದ ಬಳಿಕ, ಸಾಲವಾಯಿತು. ದುಡಿದು ತೀರಿಸೋಣವೆಂದು ಬಂದೆವು ಎಂದಿದ್ದಾರೆ. ಹೋದ ವರ್ಷ ಸಣ್ಣ ಮಗನ ಮದುವೆ ಮಾಡಿದೆವು. ಹಾಗಾಗಿ ಆ ಸಾಲ ಇದೆ. ಅದನ್ನು ತೀರಿಸಬೇಕು ಎಂದಿದ್ದಾರೆ ಮಲ್ಲಮ್ಮ.
ಇನ್ನು ಬಿಗ್‌ಬಾಸ್ ಮನೆಗೆ ಹೋಗಿ ಅಲ್ಲಿ ಕಿಚ್ಚ ಸುದೀಪ್ ಅವರ ಬಳಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಲಮ್ಮ, ಅದು ತುಂಬಾ ಖುಷಿಯ ವಿಚಾರ. ನನ್ನನ್ನು ಮಾತನಾಡಿಸಿದವರೆಲ್ಲ, ನೀನು ಪುಣ್ಯವಂತೆ ಸುದೀಪ್ ಬಳಿ ಮಾತನಾಡಿ ಬಂದಿದ್ದೀಯ ಅಂತಾ ಹೇಳ್ತಾರೆ ಎಂದು ಮಲ್ಲಮ್ಮ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




