ದಿನಕ್ಕೆ ಎಷ್ಟು ಉಪ್ಪು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು?: ಈ ಆಹಾರಗಳಿಂದ ಇಂದೇ ದೂರವಿರಿ!

ಹೃದಯದ ಆರೋಗ್ಯ ಅನ್ನೋದು ಎಷ್ಟು ಮುಖ್ಯ  ಅನ್ನೋದು ಎಲ್ಲರಿಗೂ ತಿಳಿದಿದೆ. ನಾವು ಸೇವಿಸುವ ಪ್ರತೀ ಆಹಾರವೂ ನಮ್ಮ ಹೃದಯದ ಆರೋಗ್ಯವನ್ನು ಹೇಗಿರಿಸಬೇಕು ಎಂದು ನಿರ್ಧರಿಸುತ್ತದೆ. ಅಂಥ ಆಹಾರಗಳಲ್ಲಿ ಉಪ್ಪು ಕೂಡ 1. ಹಾಗಾದ್ರೆ ಉಪ್ಪಿನ ಸೇವನೆ ಹೇಗಿರಬೇಕು..? ದಿನಕ್ಕೆ ಉಪ್ಪಿನ ಸೇವನೆ ಎಷ್ಟು ಮಾಡಬೇಕು..? ಈ ಎಲ್ಲ ಪ್ರಶ್ನೆಗಳಿಗೂ ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು ಉತ್ತರಿಸಿದ್ದಾರೆ.

ಹೃದಯ ಸಂಬಂಧಿ ಖಾಯಿಲೆ ಇರುವವರು ಕೆಲವು ಆಹಾರಗಳನ್ನು ಅವೈಡ್ ಮಾಡಬೇಕಾಗುತ್ತದೆ. ಹೆಚ್ಚಾದ ಉಪ್ಪಿನ ಸೇವನೆ, ಹಳೆಯ ಆಹಾರ ಹೀಗೆ ಹಲವು ಆಹಾರಗಳ ಸೇವನೆ ನಿಷೇಧಿಸಬೇಕಾಗುತ್ತದೆ.

ಬೇಕರಿ ತಿನಿಸು, ಮೈದಾ ಪದಾರ್ಥ, ಹೆಚ್ಚು ದಿನದ ಹಿಂದಿನ ಮಾಂಸ, ಹೆಚ್ಚು ದಿನ ಫ್ರಿಜ್‌ನಲ್ಲಿ ಇರಿಸಿದ ಆಹಾರಗಳನ್ನೆಲ್ಲ ನಾವು ಹೆಚ್ಚು ಸೇವಿಸಬಾರದು. ಫ್ರೆಶ್ ಆಹಾರಗಳನ್ನೇ ಸೇವಿಸಬೇಕು. ನಾವು ಯಾಕೆ ಈ ಕೆಲವು ಆಹಾರಗಳನ್ನು ಸೇವಿಸಬಾರದು ಅಂದ್ರೆ, ಇಂಥ ಆಹಾರ ಸೇವನೆಯಿಂದ ದೇಹದಲ್ಲಿ ಕ“ಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ.

ಹಾಗೆ ಹೆಚ್ಚಾದಾಗ, ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೃದಯಕ್ಕೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯಕ್ಕೆ ರಕ್ತ ಸಂಚಾರವಾಗದಿದ್ದಲ್ಲಿ, ಹೃದಯ ಕೆಲಸ ಮಾಡುವುದನ್ನೇ ನಿಲ್ಲಿಸುತ್ತದೆ. ಹೃದಯ ಸ್ಥಬದ್ಧವಾದರೆ, ಮನುಷ್ಯನ ಪ್ರಾಣವೇ ಹೋದಂತೆ. ಹಾಗಾಗಿ ಹೃದಯದ ಆರೋಗ್ಯ ಕಾಪಾಡಲು ಇಂಥ ಆಹಾರಗಳ ಸೇವನೆ ಮಾಡಬೇಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author