Health Tips: ಇಂದಿನ ಕಾಲದಲ್ಲಿ ಹಲವರು ತಮ್ಮ ಸ್ಕಿನ್ ಕೇರ್ಗಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಆದರೆ ಸ್ಕಿನ್ ಸಮಸ್ಯೆಗೆ ಕಾರಣವೇನು ಅನ್ನೋದೇ ಅರಿಯುವುದಿಲ್ಲ. ಆದರೆ ನಿಮ್ಮ ಮುಖದ ಮೇಲಿನ ಕಲೆಗೆ ಶಾಶ್ವತ ಪರಿಹಾರ ಹೇಗೆ ಮಾಡಬೇಕು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಸ್ಕಿನಿ ಕೇರ್ ಸ್ಪೆಶಲಿಸ್ಟ್ ಆಗಿರುವ ಡಾ.ದಿವ್ಯ ಅವರು ಈ ಬಗ್ಗೆ ವಿವರಿಸಿದ್ದು, ಮುಖದ ಮೇಲಿನ ಪಂಪಿಲ್ ಕಲೆಯನ್ನು ಶಾಶ್ವತವಾಗಿ ಹೇಗೆ ಹೋಗಲಾಡಿಸಬೇಕು ಎಂದು ಹೇಳಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಏನೇ ಚಿಕಿತ್ಸೆ ಪಡೆದರೂ ನಿಮ್ಮ ಮುಖದ ಕಲೆ ಹೋಗದಿದ್ದಲ್ಲಿ, ವೈದ್ಯರ ಬಳಿ ಹೋಗಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು. ವೈದ್ಯರು ನೀಡುವ ಕ್ರೀಮ್, ಜೆಲ್ ಬಳಸಿ, ನಿಮ್ಮ ಮುಖದಲ್ಲಿ ನೀವು ಬದಲಾವಣೆ ಕಾಣಬಹುದು ಅಂತಾರೆ ವೈದ್ಯರು.
ಅಲ್ಲದೇ, ಅಗತ್ಯಕ್ಕಿಂತ ಹೆಚ್ಚು ಮನೆ ಮದ್ದು ಮಾಡಿ, ಮುಖ ಹಾಳು ಮಾಡಿಕ“ಂಡವರೂ ಇದ್ದಾರೆ. ಹಾಗಾಗಿ ಮನೆ ಮದ್ದು ಅತೀಯಾಗಿ ಮಾಡುವ ಬದಲು, ಇದಕ್ಕೆ ಯಾವ ರೀತಿಯ ಚಿಕಿತ್ಸೆ ಉತ್ತಮ ಅನ್ನೋದನ್ನು ವೈದ್ಯರ ಬಳಿ ಬಂದು ಕೇಳಿ ತಿಳಿಯಬೇಕು.




