Health And Beauty Tips: ನಾವು ನಮ್ಮ ಮುಖದ ಮೇಲಿರುವ ಪಿಂಪಲ್ಸ್ ಹೋಗಲಾಡಿಸಲು, ಅದರ ಕಲೆ ಹೋಗಲು ಹಲವಾರು ಪ್ರಾಡಕ್ಟ್‌ಗಳನ್ನು ಬಳಸುತ್ತೇವೆ. ಆದರೆ ಆ ಪಿಂಪಲ್ ಹೇಗೆ ಬಂತು ಅನ್ನೋ ಬಗ್ಗೆ ಮಾತ್ರ ತಿಳಿಯುವುದಿಲ್ಲ. ಹಾಗಾಗಿ ವೈದ್ಯರಾಗಿರುವ ಡಾ.ದಿವ್ಯ ಅವರು, ನಮ್ಮ ಮುಖದ ಮೇಲೆ ಹೇಗೆ ಪಿಂಪಲ್ಸ್ ಬರತ್ತೆ ಅಂತಾ ವಿವರಿಸಿದ್ದಾರೆ.
ನಮ್ಮ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆದಾಗ ನಮ್ಮ ಮುಖದ ಮೇಲೆ ಮೊಡವೆಯಾಗುತ್ತದೆ. 10ರಿಂದ 13 ವರ್ಷದ ಮಧ್ಯೆ ನಮ್ಮ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ. ಈ ವೇಳೆ ನಮ್ಮ ಮುಖದ ಮೇಲೆ ಪಿಂಪಲ್ಸ್ ಬರಲು ಶುರುವಾಗುತ್ತದೆ.
ಇದನ್ನು ಟೀನೇಜ್ ಆ್ಯಕ್ನಿ ಅಂತಾ ಕರೆಯಲಾಗುತ್ತದೆ. ಸಣ್ಣ ಮಗುವಿದ್ದಾಗಲೂ ಪಿಂಪಲ್ಸ್ ಆಗುತ್ತದೆ. ಆದರೆ ಕೆಲ ದಿನಗಳಲ್ಲೇ ಅದು ಹೋಗುತ್ತದೆ. ಇನ್‌ಫಂಟೈಲ್ ಆ್ಯಕ್ನಿ ಅಂತಾ ಕರೆಯಲಾಗತ್ತೆ. ಟೀನೇಜ್ ಆ್ಯಕ್ನಿ, ಅಡೋರಲಸ್ ಅ್ಯಕ್ನಿ, 25 ವರ್ಷ ಕಳೆದ ಬಳಿಕ ಬರುವುದೇ ಅಡಲ್ಟ್ ಆ್ಯಕ್ನಿ.
ಇನ್ನು ಬರೀ ಹಾರ್ಮೋನಲ್ ಇಂಬ್ಯಾಲನ್ಸ್ ಅಲ್ಲದೇ, ವಿಟಾಮಿನ್ ಅಂಶ ಕಡಿಮೆಯಾದಾಗ, ನಾವು ಸೇವಿಸುವ ಮಾತ್ರೆಗಳಿಂದಲೂ ಮುಖದಲ್ಲಿ ಪಿಂಪಲ್ಸ್ ಕಾಣಬಹುದು. ದೇಹದಲ್ಲಿ ಉಷ್ಣತೆ ಹೆಚ್ಚಿದಾಗಲೂ ಗುಳ್ಳೆಗಳಾಗುತ್ತದೆ. ದೇಹದಲ್ಲಿ ವಿಟಾಮಿನ್ ಬಿ12 ಕಡಿಮೆಯಾದಾಗಲೂ ಮುಖದಲ್ಲಿ ಗುಳ್ಳೆಯಾಗುತ್ತದೆ.




