Uttara Kannada: ಅಕ್ರಮ ಸಂಬಂಧ ಆರೋಪ: ಜ್ಯೋತಿಷಿ ಕಮಲಾಕರ ಭಟ್ ಅರೆಸ್ಟ್

Uttara Kannada: ಅನೈತಿಕ ಸಂಬಂಧ ಆರೋಪದಡಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಪೋಲೀಸರು ಬಂಧಿಸಿದ್ದು, ಇವರ ಅಕ್ರಮ ಸಂಬಂಧಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆಂದು ಆರೋಪಿಸಲಾಗಿದೆ.

ಸುಚಿತ್ರಾ ಎಂಬ ವಿವಾಹಿತೆಯ ಜತೆ ಕಮಲಾಕರ್ ಅನೈತಿಕ ಸಂಬಂಧವಿರಿಸಿದ್ದು, ಇದನ್ನು ಪ್ರಶ್ನಿಸಿದ್ದ ಆಕೆಯ ಪತಿ, ಪತಿಯ ಸಹೋದರ ಮತ್ತೋರ್ವ ಸಂಬಂಧಿಯ ಮೇಲೆ ಸುಚಿತ್ರಾ ಕಡೆಯವರು ಹಲ್ಲೆ ಮಾಡಿದ್ದು, ಈ ಮೂವರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಗೆ ಕರೆದ“ಯ್ಯುವಾಗಲೇ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಇನ್ನು ಕೆಲ ದಿನಗಳ ಹಿಂದೆ ಸುಚಿತ್ರಾ ಪತಿಗೆ ಹೇಳದೇ, ತನ್ನಿಬ್ಬರು ಪುತ್ರಿಯರ ಜತೆ ಸುಚಿತ್ರಾ ಸಿದ್ದಾಪುರಕ್ಕೆ ಕರೆದ“ಯ್ದಿದ್ದಳು. ಆಗ ಸುಚಿತ್ರಾಳ ಹಿರಿಯ ಮಗಳು ತನ್ನಪ್ಪ ಮಹೇಶ್‌ಗೆ, ಅಪ್ಪ, ಅಮ್ಮ ಮತ್ತು ಗುರೂಜಿ ಇಬ್ಬರೂ ಬೇರೆ ಕೋಣೆಯಲ್ಲಿ ಮಲಗುತ್ತಾರೆ. ನಾನು ಮತ್ತು ತಂಗಿ 1 ಕೋಣೆಯಲ್ಲಿ ಮಲಗುತ್ತೇವೆ. ಅಮ್ಮ ನಮಗೆ ತುಂಬಾ ಹಿಂಸೆ ನೀಡುತ್ತಿದ್ದಾಳೆ. ಇಲ್ಲಿಂದ ನನ್ನನ್ನು ಕರೆದುಕ“ಂಡು ಹೋಗು, ಇಲ್ಲದಿದ್ದಲ್ಲಿ ನಾನು ಸತ್ತುಹೋಗುತ್ತೇನೆ ಎಂದು ಸಂದೇಶ ಕಳುಹಿಸಿದ್ದಾಳೆ.

ಬಳಿಕ ವಿಷಯ ತಿಳಿದ ಸುಚಿತ್ರಾಳ ಪತಿ ಮಹೇಶ್ ಮತ್ತು ಆತನ ಸಹೋದರ ವಸಂತ್, ಮತ್ತೋರ್ವ ಸಂಬಂಧಿ ಕುಮಾರ್ ಮತ್ತು ಕಮಲಾಕರ್ ನಡುವೆ ಜಗಳವಾಗಿದೆ. ಈ ವೇಳೆ ಕಮಲಾಕರ್ ಕಾರ್ ಪುಡಿ ಪುಡಿ ಮಾಡಲಾಗಿದೆ. ಬಳಿಕ ಗಲಾಟೆ ನಡೆದಿದ್ದು, ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಈ ಹಲ್ಲೆಯಲ್ಲಿ ವಸಂತ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆತ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ.

ಮಹೇಶ್ ಮತ್ತು ಕುಮಾರ್‌ಗೆ ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಮಲಾಕರ್ ಮತ್ತು ಸುಚಿತ್ರಾ ಸೇರಿ 4 ಜನರನ್ನು ಬಂಧಿಸಲಾಗಿದೆ. ಬಂಧನ ಭೀತಿಯಿಂದ ಕಮಲಾಕರ್ ಎಸ್ಕೇಪ್ ಆಗಲು ಯತ್ನಿಸಿದ್ದರೂ ಕೂಡ, ಕಮಲಾಕರ್‌ರನ್ನು ಪೋಲೀಸರು ಬಂಧಿಸಿದ್ದಾರೆ. ಅಂದಹಾಗೆ ಎ1 ಆರೋಪಿ ಸುಚಿತ್ರಾ ಆಗಿದ್ದು, ಎ2 ಆರೋಪಿ ಲೋಕನಾಥ್ ಚೌಡಪ್ಪ, ಎ3 ಆರೋಪಿ ಓರ್ವ ವ್ಯಕ್ತಿಯಾಗಿದ್ದು, ಎ 4 ಆರೋಪಿ ಕಮಲಾಕರ್ ಆಗಿದ್ದಾರೆ.

About The Author