Political News: ಪ್ರಧಾನಿ ಮೇಲೆ ಕಾಂಗ್ರೆಸ್‌ನಿಂದ ಹಲ್ಲೆಗೆ ಯತ್ನ ಆರೋಪ: ನಾಚಿಕೆಗೇಡಿನ ಸಂಗತಿ ಎಂದ ಆರ್.ಅಶೋಕ್

Political News: ಕೆಲದಿನಗಳ ಹಿಂದೆ ಲೋಕಸಭೆ ಸದನ ನಡೆದಿದ್ದು, ಈ ಸದನಕ್ಕೆ ಪ್ರಧಾನಿ ಮೋದಿ ಬಾರದಂತೆ ಸ್ಪೀಕರ್ ಓಂ ಬಿರ್ಲಾ ತಡೆದಿದ್ದರು. ಇದಕ್ಕೆ ಕಾರಣವೇನೆಂದರೆ, ಕಾಂಗ್ರೆಸ್ಸಿಗರು ಪ್ರಧಾನಿ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಮಾತನ್ನು ಕಾಂಗ್ರೆಸ್ ನಾಯಕರು ಸುಳ್ಳು ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಕಾಂಗ್ರೆಸ್ ಹಲ್ಲೆ ಪ್ರಯತ್ನ ನಡೆಸಿದ್ದರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸೋಲಿನ ಹತಾಶೆ ಕಾಂಗ್ರೆಸ್ ಪಕ್ಷವನ್ನ ಯಾವ ಕೀಳು ಮಟ್ಟಕ್ಕೆ ಇಳಿಸಿದೆ ಅಂದರೆ ಮೌತ್ ಕಾ ಸೌದಾಗರ್, ನೀಚ್, ಚಾಯ್ ವಾಲಾ, ರಾವಣ, ಚೌಕಿದಾರ್, ಚೋರ್ ಹೇ, ವಿಷಸರ್ಪ. ಹೀಗೆಲ್ಲ ಬಾಯಿಗೆ ಬಂದಂತೆ ಪ್ರಧಾನಿ ಮೋದಿ ಅವರನ್ನ ನಿಂದನೆ ಮಾಡಿದ್ದಾಯ್ತು. ಕಾಂಗ್ರೆಸ್ ಪಕ್ಷದ ನಾಯಕರು ಪ್ರಧಾನಿ ಮೋದಿ ಅವರ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಾಗಲೆಲ್ಲಾ ದೇಶದ ಜನ ಅವರಿಗೆ ಛೀಮಾರಿ ಹಾಕಿ, ಪಾಠ ಕಲಿಸಿದ್ದೂ ಆಯಿತು.

ಆದರೆ ಇನ್ನೂ ಬುದ್ಧಿ ಕಲಿಯದ ಕಾಂಗ್ರೆಸ್ ಪಕ್ಷ ಮೊನ್ನೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ ಮೇಲೆ ಹಲ್ಲೆ ಮಾಡಲು ಯೋಜನೆ ರೂಪಿಸಿತ್ತು ಅಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಗಾಂಧಿ ಹೆಸರು ಹೇಳಿಕೊಂಡು ರಾಜಕೀಯ ಮಾಡುವ, ಗಾಂಧಿ ಹೆಸರನ್ನು ಕದ್ದು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಇವತ್ತು ಗಾಂಧೀಜಿ ಅವರ ಅಹಿಂಸಾ ತತ್ವವನ್ನು ಗಾಳಿಗೆ ತೂರಿ, ಹಿಂಸೆಯ ಮಾರ್ಗ ಹಿಡಿದಿರುವುದು ಗಾಂಧೀಜಿ ಅವರಿಗೆ ಮಾಡುತ್ತಿರುವ ಘೋರ ಅವಮಾನ ಕೂಡ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಪ್ರಜ್ಞಾವಂತ ನಾಗರಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಬೆಲೆ ತೆತ್ತಲೇಬೇಕು ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

About The Author