Vijayanagara: ವಿಜಯನಗರದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿರುವ ಸಚಿವ ಜಮೀರ್ ಅಹಮ್ಮದ್, ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡಿದ್ದಾರೆ. 2028ರವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಆಮೇಲೆ ಬೀದಿಲಿ ಹೋಗುವ ದಾಸಯ್ಯನನ್ನು ಸಿಎಂ ಮಾಡಿದ್ರೂ ಓಕೆ ಎಂದು ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಖುದ್ದಾಗಿ ಹೇಳಿದ್ದಾರೆ. ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಹೈಕಮಾಂಡ್ ಎಲ್ಲಿಯವರೆಗೂ ಸಿಎಂ ಆಗಿರಲು ಹೇಳತ್ತೋ, ಅಲ್ಲಿವರೆಗೂ ಸಿಎಂ ಆಗಿರ್ತೀನಿ ಎಂದು ಸಿದ್ದರಾಮಯ್ಯವರೇ ಹೇಳಿದ್ದಾರೆ. ಸಿದ್ದರಾಮಯ್ಯನವರನ್ನು ಬದಲಾಯಿಸೋಕ್ಕೆ ನನ್ನಿಂದ ನಿಮ್ಮಿಂದ ಸಾಧ್ಯವಿಲ್ಲ. ಅದನ್ನೆಲ್ಲ ಹೈಕಮಾಂಡ್ ಡಿಸೈಡ್ ಮಾಡತ್ತೆ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.
ಅಲ್ಲದೇ ಅವರು ಹಾಕಿದ ಗೆರೆಯನ್ನು ನಾವ್ಯಾರು ದಾಟಲ್ಲ. 2028ರವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಅನ್ನೋದು ನನ್ನ ಅಭಿಪ್ರಾಯ. ಆದರೆ ಅದಕ್ಕೆ ಹೈಕಮಾಂಡ್ ಸಹ ಓಕೆ ಎನ್ನಬೇಕು. ಆಮೇಲೆ ಬೀದಿಲಿ ಹೋಗುವ ದಾಸಯ್ಯನನ್ನು ಸಿಎಂ ಮಾಡಿದ್ರೂ ನಾನು ಓಕೆ ಎನ್ನಲೇಬೇಕು. ಏಕೆಂದರೆ ಅದು ಹೈಕಮಾಂಡ್ ನಿರ್ಧಾರ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.




