ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ಮೋದಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ: ರೇಣುಕಾಚಾರ್ಯ

Political News: ಬೆಂಗಳೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ರೇಣುಕಾಚಾರ್ಯ, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ಪ್ರಧಾನಿ ಮೋದಿ ತಾಕತ್ತು ಇಡೀ ದೇಶಕ್ಕೆ ಗೊತ್ತು ಎಂದಿದ್ದಾರೆ.

ಪೆಹಲ್ಗಾಮ್ ದಾಳಿಯಾದಾಗ, ಅಮೆರಿಕ ಅಧ್ಯಕ್ಷ ಭಾರತ ವಿರುದ್ಧ ಮಾತನಾಡಿದಾಗ, ಪ್ರಧಾನಿ ಮೋದಿಯವರು ಯಾವ ರೀತಿ ಆ್ಯಕ್ಷನ್ ತೆಗೆದುಕ“ಂಡಿದ್ದರು ಎಂದು ಎಲ್ಲರಿಗೂ ತಿಳಿದಿದೆ. ನೀವೋಬ್ಬರು ಹಿರಿಯ ರಾಜಕಾರಣಿ, ಆ ಬಗ್ಗೆ ನಾನು ಗೌರವಿಸುತ್ತೇನೆ. ಆದರೆ ಪ್ರಧಾನ ಮೋದಿ ವಿರುದ್ಧ ನಿಮ್ಮ ಹೇಳಿಕೆಗಳ ಬಗ್ಗೆ ನೀವು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ರಾಜ್ಯಪಾಲರ ಬಾಯಿಯಿಂದ ಸುಳ್ಳು ಹೇಳಿಸುವ ಪ್ರಯತ್ನ ಮಾಡಿದ್ದೀರಿ. ನಿಮ್ಮ ಕುರ್ಚಿ ಉಳಿಸಿಕ`ಳ್ಳಬೇಕು ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ. ಪ್ರಧಾನಿ ಮೋದಿ ಅವರ ತಾಕತ್ ಬಗ್ಗೆ ಮಾತನಾಡುತ್ತೀರಿ. ಪ್ರಧಾನಿ ಗತ್ತು ದೇಶಕ್ಕೇ ತಿಳಿದಿದೆ.

ಕಾಂಗ್ರೆಸ್ ಪಕ್ಷ ಬರೀ 3 ರಾಜ್ಯದಲ್ಲಿದೆ. ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ. ಮೂರೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಿಮಾಚಲದಲ್ಲಿ ಇನ್ನು ಕೆಲ ದಿನಗಳಲ್ಲೇ ಕಾಂಗ್ರೆಸ್ ಉರುಳಿ ಹೋಗುವ ಸಾಧ್ಯತೆ ಇದೆ. ತೆಲಂಗಾಣ ಯೋಜನೆಗಳನ್ನು ಜಾರಿ ಮಾಡಲಾಗದೇ, ಆರ್ಥಿಕ ಸ್ಥಿತಿ ಬಿಗಡಾಯಿಸಿಕ“ಂಡಿದೆ. ಆದರೆ ಕರ್ನಾಟಕದಲ್ಲಿ ನಿಮ್ಮ ಕುರ್ಚಿ ಉಳಿಸಿಕ“ಳ್ಳಬೇಕು ಎಂಬ ಕಾರಣಕ್ಕೆ ಪ್ರಧಾನಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತೀದ್ದೀರಿ. ನೀಡಿದ ಯೋಜನೆ ಪೂರ್ಣ ಮಾಡಲಾಗದೇ ಪರದಾಡುತ್ತಿದ್ದೀರಿ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

About The Author