Political News: ಸಿಎಂ ಸಿದ್ದರಾಮಯ್ಯನವರು ದಾಖಲೆ ರಹಿತ ಜನವಸತಿಗಳಿಗೆ ಕಂದಾಯ ಗ್ರಾಮದ ಭಾಗ್ಯ ನೀಡಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ. ಕೆಲ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಹಕ್ಕುಪತ್ರ ವಿತರಣೆ ಮಾಡಲಾಗಿದೆ.
ನಮ್ಮ ಸರ್ಕಾರವು ಹಲವು ವರ್ಷಗಳಿಂದ ಗ್ರಾಮದ ಸ್ಥಾನಮಾನವಿಲ್ಲದೆ, ಸೌಲಭ್ಯಗಳಿಂದ ವಂಚಿತರಾಗಿದ್ದ ಜನವಸತಿ ಪ್ರದೇಶಗಳಿಗೆ ದಾಖಲೆಯನ್ನು ಕಲ್ಪಿಸಿ ಅವರ ವಾಸಿಸುವ ಹಕ್ಕನ್ನು ಎತ್ತಿ ಹಿಡಿದಿದೆ. 2023ರ ವರೆಗೆ ಕೇವಲ 1.08 ಲಕ್ಷ ಜನರಿಗೆ ಮಾತ್ರ ಮ್ಯಾನುವಲ್ ಹಕ್ಕುಪತ್ರ ನೀಡಲಾಗಿತ್ತು. ಆದರೆ ಇಂದು ಅಂತಹ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಹಕ್ಕುಪತ್ರ ವಿತರಣೆಗೆ ವೇಗ ನೀಡಲಾಗಿದೆ. ಈ ಮೂಲಕ ಇದೊಂದು ಜನಪರ ಕ್ರಾಂತಿಯಾಗಿ ಬದಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ 1,11,111 ಜನರಿಗೆ ಈಗಾಗಲೇ ಡಿಜಿಟಲ್ ಹಕ್ಕುಪತ್ರ ನೀಡಲಾಗಿದೆ. ಫೆಬ್ರವರಿ 14ರಂದು ಹಾವೇರಿಯಲ್ಲಿ 1,06,724 ಜನರಿಗೆ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಕೇವಲ ಹಕ್ಕುಪತ್ರವಲ್ಲ, ನೋಂದಣಿಯೊಂದಿಗೆ ಇ-ಸ್ವತ್ತು ಕೂಡ ಜನರ ಕೈಸೇರುತ್ತಿದೆ. ಶೀಘ್ರದಲ್ಲೇ 1,50,000 ಜನರಿಗೆ ಡಿಜಿಟಲ್ ಹಕ್ಕುಪತ್ರ ಸಿಗಲಿದೆ. ಇದು ಸದ್ದಿಲ್ಲದೇ ನಡೆದ ಕ್ರಾಂತಿ. ಪ್ರಣಾಳಿಕೆಯಲ್ಲಿ ಹೇಳದೇ ಜಾರಿ ಮಾಡಿದ ʼಭೂ ಗ್ಯಾರಂಟಿʼ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.




