Political News: RSS ಚಿವುಟಿದರೆ, BJP ಅಳುವುದೇಕೆ?: ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಪ್ರಶ್ನೆ

Political News: ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇರುತ್ತಾರೆ. ಆರ್ಎಸ್‌ಎಸ್‌ ವಿರುದ್ಧ ಮಾತನಾಡಿದಾಗ ಬಿಜೆಪಿಗರು ನನ್ನ ಮೇಲೆ ಹಗೆ ಸಾಧಿಸಲು ಸಾಲು ಸಾಲಾಗಿ ಬರಲು ಕಾರಣವೇನು ಅನ್ನೋ ರೀತಿ ಪ್ರಶ್ನಿಸಿದ್ದಾರೆ.

RSS ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು RSS ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು RSS ಸಮರ್ಥಿಸುವುದು ಅನಿವಾರ್ಯ. ಬಿಜೆಪಿ ನಾಯಕರು ತಾವು ಮಾಡಿದ ಟೀಕೆ, ತಾವು ನೀಡಿದ ಹೇಳಿಕೆಗಳೆಲ್ಲದರ ರಿಪೋರ್ಟ್ ಕಾರ್ಡನ್ನು ನಾಗಪುರಕ್ಕೆ ಕಳಿಸಿಕೊಡಬೇಕು, ಯಾರು ಹೆಚ್ಚು ತೀವ್ರವಾಗಿ ನನ್ನನ್ನು ನಿಂದಿಸಿರುತ್ತಾರೋ ಅವರಿಗೆ ಪ್ರಮೋಷನ್ ದೊರಕಲಿದೆ! ಎಂದು ಸಚಿವ ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.

ಈ ಮೂಲಕ “RSS ಹಾಗು BJP ಗೆ ಸಂಬಂಧವಿಲ್ಲ“ ಎಂಬ ಮೋಹನ್ ಭಾಗವತರ ಹೇಳಿಕೆ ಶತಮಾನದ ಸುಳ್ಳು ಎಂಬುದನ್ನು ಬಿಜೆಪಿಯವರೇ ನಿರೂಪಿಸುತ್ತಿದ್ದಾರೆ. RSS ಚಿವುಟಿದರೆ, BJP ಅಳುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

About The Author