Web News: ಫೆ.22ಕ್ಕಿದೆ ಸೀರೆ ಸಂತೆ, ಕಡಿಮೆ ಬೆಲೆಗೆ ಸಿಗತ್ತೆ ಪ್ಯೂರ್ ಸಿಲ್ಕ್ ಸಾರಿ

Web News: ಸೀರೆ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ ಹೇಳಿ..? ಪುಟ್ಟ ಹೆಣ್ಣು ಮಕ್ಕಳು ಕೂಡ, ಅಮ್ಮ ಧರಿಸಿದ ಸೀರೆ ನೋಡಿ, ನನಗೂ ಸೀರೆ ಉಡಿಸು ಅಂತಾ ಕೇಳ್ತಾವೆ. ಅಂಥ ಚೆಂದದ ಉಡುಪು ಈ ಸೀರೆ. ಹಾಗಾಗಿ ಮಹಿಳಾ ಮಣಿಯರಿಗಾಗಿಯೇ ದೊಡ್ಡಬಳ್ಳಾಪುರ ಫೆ.22ಕ್ಕೆ ಸೀರೆ ಸಂತೆ ನಡೆಯುತ್ತಿದೆ. ಅಲ್ಲಿ 500, ಸಾವಿರದಿಂದ ಹಿಡಿದು 40 ಸಾವಿರದವರೆಗೆ ಪ್ಯೂರ್ ರೇಷ್ಮೆ ಸೀರೆ ಸಿಗಲಿದೆ. ಅಂಥ ಸೀರೆ ಸಂತೆಗೆ ಬರುವ ಸೀರೆ ಎಲ್ಲಿಂದ ಬರತ್ತೆ..? ಎಷ್ಟು ಬೆಲೆಗೆ ಸಿಗತ್ತೆ..? ಹೀಗೆ ಹಲವು ಪ್ರಶ್ನೆಗಳಿಗೆ ದೊಡ್ಡಬಳ್ಳಾಪುರ ಎಮ್‌ಎಲ್‌ಎ ಧೀರಜ್ ಮುನಿರಾಜು ಉತ್ತರಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನೇಕಾರರು ನೇಯುವ ಪ್ಯೂರ್ ರೇಷ್ಮೆ ಸೀರೆಗೆ ಹೆಚ್ಚೆಂದರೆ 40 ಸಾವಿರ ರೂಪಾಯಿ ಇರುತ್ತದೆ. ಆದರೆ ಅದೇ ಸೀರೆಯನ್ನು ನೀವು ಕಂಚಿಗೆ ಹೋಗಿ ಖರೀದಿಸಿದರೆ, 1 ಲಕ್ಷ ರೂಪಾಯಿ ಇರುತ್ತದೆ. ಬೆಂಗಳೂರಿಗೆ ಬರುವಾಗ ಅದರ ಬೆಲೆ ಡಬಲ್ ಆಗಿರುತ್ತದೆ ಅಂತಾರೆ ಧೀರಜ್.

ದೊಡ್ಡಬಳ್ಳಾಪುರದಲ್ಲಿ ತಿಂಗಳಿಗೆ 10 ಲಕ್ಷ ಸೀರೆ ನೇಯಲಾಗುತ್ತದೆ. ಇದೇ ಸೀರೆ ಕಂಚಿಗೆ ಹೋಗುತ್ತದೆ. ಕಾಂಚಿವರಂ, ಧರ್ಮಾವರಂ ಸೀರೆಗಳನ್ನು ದೊಡ್ಡಬಳ್ಳಾಪುರದಲ್ಲೇ ನೇಯಲಾಗುತ್ತದೆ ಅನ್ನೋದು ವಿಶೇಷ.

About The Author