ಕೊಪ್ಪಳದಲ್ಲಿ ಆರ್ಥಿಕ ಸಾಕ್ಷರತಾ ಜಾಗೃತಿ ಕಾರ್ಯಕ್ರಮ!

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ಕಿರು ಹಣಕಾಸು ಒಕ್ಕೂಟ ಕೊಪ್ಪಳ ಘಟಕದ ಸಂಯುಕ್ತ ಆಶ್ರಯದಲ್ಲಿ ಆರ್ಥಿಕ ಸಾಕ್ಷರತಾ ಸಮಾಲೋಚನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನ ಅಕ್ಮಿ CEO VN ಹೆಗಡೆ, ಮಾರುತಿ ಕರ್ಪಾನಿ, ನಬಾರ್ಡ್ ಕೊಪ್ಪಳ DDM ಮಹದೇವಕೀರ್ತಿ ಹಾಗೂ ಬಸವರಾಜ್ ವಡಿಗೇರಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು

ಗ್ರಾಹಕರಿಗೆ ಆರ್ಥಿಕ ಸಾಕ್ಷರತೆ ನೀಡುವ ಉದ್ದೇಶದಿಂದ ಹಣಕಾಸಿನ ನಿರ್ವಹಣೆ, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಒದಗಿಸುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅಕ್ಮಿ ತಿಳಿಸಿದೆ.

ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳು ಭಾಗವಹಿಸಿವೆ. State Bank of India, ಲೀಡ್ ಬ್ಯಾಂಕ್ ಕೊಪ್ಪಳ, ಮುತ್ತೂಟ್ ಮೈಕ್ರೋಪಿನ್ ಲಿಮಿಟೆಡ್ ಸೇರಿದಂತೆ ಹಲವಾರು ಸಂಸ್ಥೆಗಳು ಹಣಕಾಸು ಯೋಜನೆಗಳು, ಉಳಿತಾಯ, ಸಾಲ ನಿರ್ವಹಣೆ ಹಾಗೂ ಗ್ರಾಹಕರಲ್ಲಿ ಉಂಟಾಗುವ ಗೊಂದಲಗಳ ಬಗ್ಗೆ ಮಾಹಿತಿ ನೀಡಿದವು.

ಆರ್ಥಿಕ ಸಾಕ್ಷರತಾ ಸಮಾಲೋಚನೆ ಕಾರ್ಯಕ್ರಮದಲ್ಲಿ ಅನೇಕ ಮಹಿಳಾ ಸಂಘ-ಸಂಸ್ಥೆಗಳ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು, ಕಾರ್ಯಕ್ರಮದ ಪ್ರಯೋಜನ ಪಡೆದು ಯಶಸ್ವಿಗೊಳಿಸಿದರು.

About The Author