ಲೇಡಿ ಖರ್ತನಾಕ್ ಪ್ಲ್ಯಾನ್; QR ಕೋಡ್ ಟ್ರಿಕ್ ಬಯಲು!

ಚಿನ್ನಾಭರಣ ಮಳಿಗೆಗಳನ್ನು ಟಾರ್ಗೆಟ್ ಮಾಡಿಕೊಂಡು ಸಿನಿಮಾ ಸ್ಟೈಲ್‌ನಲ್ಲಿ ನಕಲಿ QR ಕೋಡ್ ಸೃಷ್ಟಿಸಿ ಕಳ್ಳತನ ನಡೆಸುತ್ತಿದ್ದ ಮಹಿಳೆಯನ್ನು ರಾಣೇಬೆನ್ನೂರು ಶಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಶ್ರೀದೇವಿ ಕಟ್ಟೆಕಾರ (30) ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿಯ ನವನಗರ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಶ್ರೀದೇವಿ ಐಷಾರಾಮಿ ಕಾರಿನಲ್ಲಿ, ಮಗು ಜತೆ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದುದು ತನಿಖೆಯಲ್ಲಿ ಬಹಿರಂಗವಾಗಿದೆ. ಮೊದಲೇ ನಕಲಿ ಚಿನ್ನಾಭರಣ ತಯಾರಿಸಿಕೊಂಡು, ತಾನೇ ಸೃಷ್ಟಿಸಿದ QR ಕೋಡ್ ಟ್ಯಾಗ್‌ಗಳೊಂದಿಗೆ ಮಳಿಗೆಗಳಿಗೆ ಬರುತ್ತಿದ್ದಳು ಎನ್ನಲಾಗಿದೆ.

ಈ ಲೇಡಿ ನಾನು M.COM ಓದಿ ಖಾಸಗಿ ಕಾಲೇಜ್ ನಲ್ಲಿ ಟೀಚರ್ ಆಗಿದ್ದೇನೆ. ನನಗೆ ತುಂಬಾ ಕಷ್ಟು ಇದೆ ಅಂತೇಳಿ ಡ್ರಾಮಾ ಮಾಡ್ತಿದ್ದಳು. ಎರಡೂ-ಮೂರು ಆಧಾರ ಕಾರ್ಡ್ ಗಳನ್ನ ಬಳಸುತ್ತಿದ್ದಳು. ನನ್ನ ಗಂಡ ಆರ್ಮಿಯಲ್ಲಿದ್ದಾನಂತೇಳಿ ಕಟ್ಟು ಕಥೆ ಕಟ್ಟಿದ್ದಳು.
ಆರ್ಮಿಯಲ್ಲಿರೋ ಬಗ್ಗೆ ನಕಲಿ ಐಡಿ ಕಾರ್ಡ್ ನ್ನು ಕೂಡ ಶ್ರೀದೇವಿ ಸೃಷ್ಟಿ ಮಾಡಿದ್ದಳು. ಚಿನ್ನಾಭರಣ ವೀಕ್ಷಣೆ ವೇಳೆ ನಕಲಿ ಚಿನ್ನವನ್ನು ಬದಲಿಸಿ, ಅಸಲಿ ಚಿನ್ನವನ್ನು ಕಳ್ಳತನ ಮಾಡುತ್ತಿದ್ದ ಚಾಳಿ ಆರೋಪಿಯದ್ದಾಗಿತ್ತು.

ಅದೇರೀತಿ ಬೆನಕಾ ಗೋಲ್ಡ್ನಲ್ಲಿ ಬಾಡಿಗೆ ಕ್ಯಾಬ್ ಮಾಡಿಕೊಂಡು ಮಾರಾಟಕ್ಕೆ ಬಂದಿದ್ದಾಗ, ಶ್ರೀದೇವಿಯ ಆಧಾರ & ಮೊಬೈಲ್ ನಂಬರ್ ಹೊಂದಾಣಿಕೆ ಆಗಿಲ್ಲ. ಆ ಸಂದರ್ಭದಲ್ಲಿ ಸಿಬ್ಬಂದಿಗೆ ಅನುಮಾನ ಮೂಡಿದೆ. ಬಳಿಕ ಸ್ಥಳೀಯರಿಗೆ, ಪೊಲೀಸರಿಗೆ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾನೆ. ಕದ್ದ ಚಿನ್ನವನ್ನು ಅದೇ ದಿನವೇ ಬೇರೆಡೆ ಮಾರಾಟ ಮಾಡಲು ಯತ್ನಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೇ ರೀತಿಯಲ್ಲಿ ಶಿವಮೊಗ್ಗದ ಭೀಮಾ ಜ್ಯುವೆಲರ್ಸ್ನಲ್ಲಿ ಕದ್ದ ಚಿನ್ನವನ್ನು ಮಾರಾಟಕ್ಕೆ ಯತ್ನಿಸಿದ್ದಾಳೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಒಪ್ಪಿಸಿದಾಗ, ಆರೋಪಿಯ ಖರ್ತನಾಕ್ ಪ್ಲ್ಯಾನ್ ರಿವೀಲ್ ಆಗಿದೆ.

About The Author