ಸೈಲೆಂಟ್ ಆಗಿ ಬಂದು ಅಧಿಕಾರಿಗಳಿಗೆ ಶಾಕ್ ಕೊಟ್ಟ ಎಸಿ!

ಚಿಕ್ಕೋಡಿ ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ, ತಹಶಿಲ್ದಾರ್ ರಾಜೇಶ್ ಬುರ್ಲಿ ಅವರು ಬೈಕ್ ಮುಖಾಂತರ ತೆರಳಿ ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಮತ್ತು ಮಾರುಕಟ್ಟೆ, ಬೀದಿಗಳಿಗೆ ತೆರಳಿ ಅಲ್ಲಿಯ ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಜನ ಸಾಮಾನ್ಯರನ್ನು ಸಂಪರ್ಕಿಸಿ ಅವರ ಅನಿಸಿಕೆಗಳನ್ನು ಕಲೆ ಹಾಕಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಿದರು. ಸಾರ್ವಜನಿಕ ಆಸ್ಪತ್ರೆಗೆ ಮತ್ತು ತಾಯಿ-ಮಕ್ಕಳ ಆಸ್ಪತ್ರೆಗೆ ಭೆಟ್ಟಿ ನೀಡಿ ರೋಗಿಗಳೊಂದಿಗೆ ಕೆಲ ಸಮಯ ಕಳೆದು ಅಲ್ಲಿಯ ವ್ಯವಸ್ಥೆಯ ಕುರಿತು ವೈದ್ಯಾಧಿಕಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಇವರು ಧಿಡೀರನೆ ಪಟ್ಟಣದಲ್ಲಿ ಸಂಚರಿಸಿರುವ ವಿಷಯ ತಿಳಿದ ಕೆಲ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿದೆ. ಪಟ್ಟಣ ಸಂಚಾರದ ಹಿಂದೆ ವ್ಯವಸ್ಥೆಯ ಬದಲಾವಣೆ ನಿಶ್ಚಿತ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

About The Author