Political News: ಮೈಸೂರಿನಲ್ಲಿಂದು ಮಾಧ್ಯಮಗಳ ಮಾತನಾಡಿರುವ ಎಸ್.ಆರ್.ವಿಶ್ವನಾಥ್, ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿನೇ ಇಲ್ಲಾ ಅನ್ನೋ ರೀತಿ ಜನಪ್ರತಿನಿಧಿಗಳು ನಡೆದುಕ“ಳ್ತಿದ್ದಾರೆ. ನಮ್ಮ ಬಳಿ ದುಡ್ಡಿದ್ದಾಗ, ಬಜೆಟ್ಗೆ ತಕ್ಕಷ್ಟು ದುಡ್ಡಿದ್ದಾಗ ಈ ರೀತಿ ಯೋಜನೆಗಳನ್ನು ನೀಡಬೇಕು. ಆದರೆ ದುಡ್ಡೇ ಇಲ್ಲದಿರುವಾಗ ಇದೆಲ್ಲ ಮಾಡುವುದೇಕೆ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ನೀವು 7 ಲಕ್ಷ ಕೋಟಿ ಸಾಲ ಮಾಡಿ, ಬೆಸ್ಟ್ ಫೈನಾನ್ಸ್ ಮಿನಿಸ್ಟರ್ ಅಂತಾ ನೀವೇ ಬೆನ್ನು ತಟ್ಟಿಕ`ಳ್ತೀರಿ. ನಿಮಗೆ ಅಭಿವೃದ್ಧಿ ಆಡಳಿತ ಇತಿಹಾಸವೇ ತಿಳಿದಿಲ್ಲ. ನಮ್ಮ ರಾಜ್ಯದಲ್ಲಿ ಎಂಥೆಂಥ ಫೈನಾನ್ಸ್ ಮಿನಿಸ್ಟರ್ ಇದ್ದರೂ ತಿಳಿದಿದೆಯಾ..? ಎಂಥೆಂಥ ಕಾರ್ಯಕ್ರಮಗಳನ್ನು ನೀಡಿದ್ದಾರೆ ಗ“ತ್ತಾ..? ಆದರೆ ನೀವು ಇಷ್ಟು ಸಾಲ ಇದ್ದು, ಹೀಗೆ ಯೋಜನೆ ನೀಡ್ತಿದ್ದೀರಲ್ಲಾ..? ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಗಾಂಧಿ ಹೆಸರಲ್ಲಿ ಚಳುವಳಿ ಮಾಡ್ತೀದ್ದೀರಿ. ಜತೆಗೆ ಗಾಂಧಿ ಹೆಸರಲ್ಲಿ ಹೆಂಡ ಕುಡಿಸಿ, ಜನರನ್ನು ಹಾಳು ಮಾಡ್ತಿದ್ದೀರಾ. 45 ಸಾವಿರ ಕೋಟಿ ಹೆಂಡದಿಂದ ಸರ್ಕಾರಕ್ಕೆ ಲಾಭ ಬರುತ್ತಿದೆ. ಹಾಗಾಗಿ ಹೆಂಡ್ತಿರೀಗೆ 2 ಸಾವಿರ ರೂಪಾಯಿ ನೀಡಿ, ಗಂಡಂದಿರಿಗೆ ಹೆಂಡ ಸಿಗುವಂತೆ ಮಾಡಿ, ರಾಜ್ಯದ ಜನರನ್ನು ನೀವು ಹಾಳು ಮಾಡ್ತಿದ್ದೀರಿ ಎಂದು ಎಸ್.ಆರ್.ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.




